
ಯಾದಗಿರಿ : ಯಾದಗಿರಿ ಜಿಲ್ಲೆಯ ಶಹಾಪುರ ಪಟ್ಟಣದ ಶಾಂತು ಹೋಟೆಲ್ ನಲ್ಲಿ ನೀಡಿದ ವಾಟರ್ ಬಾಟಲ್ನಲ್ಲಿ ಜೇಡ ಪತ್ತೆಯಾಗಿದೆ. 2 ಲೀಟರ್ ಸ್ಲ್ಯಾಶ್ ಕಂಪನಿಯ ಬಾಟಲ್ ಖರಿದೀಸಿದ್ದ ಗ್ರಾಹಕರು ಕುಡಿಯಲು ಮುಚ್ಚಲ ತೆಗೆದಾಗ ಜೇಡ ಪತ್ತೆಯಾಗಿದೆ.
ಗ್ರಾಹಕರು ಸುರಕ್ಷತಾ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಗ್ರಾಹಕರ ಮಾಹಿತಿ ಮೇರೆಗೆ ಆಹಾರ ಸುರಕ್ಷತಾ ಅಧಿಕಾರಿಗಳು ಹೋಟೆಲ್ಗೆ ಭೇಟಿ ನೀಡಿ, ಪರಿಶೀಲಿಸಿ 2 ಲೀಟರ್ ಸ್ಲಾಶ್ ವಾಟರ್ ಬಾಟಲ್ ವಶಕ್ಕೆ ಪಡೆದಿದ್ದಾರೆ.
ಅಷ್ಟೆ ಅಲ್ಲದೆ, ಶ್ರೇಯಸ್ ಟ್ರೇಡರ್ಸ್ ಕಂಪನಿಯ ಗೋಡೌನ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಮಹಾರಾಷ್ಟ್ರದ ಸೊಲ್ಲಾಪುರ ಮೂಲದ ಸ್ಲಾಶ್ ಡಿಸ್ಟ್ರಿಬ್ಯೂಟರ್ ವಿರುದ್ಧ ಪ್ರಕರಣ ದಾಖಲಾಗಿದೆ.
Poll (Public Option)

Post a comment
Log in to write reviews