ಮೈಸೂರು : ಕರ್ನಾಟಕದಾದ್ಯಂತ ಗಣೇಶ ಚತುರ್ಥಿಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಮನೆ ಹಾಗು ಸಾರ್ವಜನಿಕ ಸ್ಥಳಗಳಲ್ಲಿ ಗಣಪತಿಯನ್ನು ಕೂರಿಸಿ, ವಿಶೇಷ ಅಲಂಕಾರ ಮಾಡಿ, ಪೂಜಿಸಲಾಗುತ್ತದೆ.
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿಹಬ್ಬದ ಸಂಭ್ರಮ ನೋಡುವುದೇ ಚಂದ. ಇಲ್ಲಿನ ಗೊಂಬೆಗಳ ಅಲಂಕಾರ ನೋಡುಗರನ್ನು ಮಂತ್ರ ಮುಗ್ದರನ್ನಾಗಿಸುತ್ತವೆ. ಗಣೇಶ ಚತುರ್ಥಿಯ ಪ್ರಯುಕ್ತ ಗಣಪನ ವಿಗ್ರಹಗಳು ಗಮನ ಸೆಳೆಯುತ್ತಿವೆ. ಕಲಾವಿದ ರೇವಣ್ಣ ಕೈ ಚಳಕದಲ್ಲಿ ವಿಭಿನ್ನ ಗಣೇಶನ ಮೂರ್ತಿಗಳು ಮೂಡಿ ಬಂದಿವೆ.
ಗಣಪತಿಯ ಅಕ್ಕಪಕ್ಕದಲ್ಲಿ ಪ್ರಧಾನಿ ಮೋದಿ, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ನಿಂತಿರುವ ಮೂರ್ತಿ. ಅಯೋಧ್ಯಾ ರಾಮಲಲ್ಲಾ ವಿಗ್ರಹದ ಜೊತೆ ಗಣೇಶನ ಮೂರ್ಥಿ ಇರಿಸಲಾಗಿದೆ. ರಾಮಲಲ್ಲಾ ಶಿಲ್ಪಿ ಅರುಣ್ ಯೋಗಿರಾಜ್‌ಗೆ ಗಣಪನಿಂದ ಹೂಗುಚ್ಛ. ಮೇಘಾಲಯದ ರಾಜ್ಯಪಾಲರಾದ ಕನ್ನಡಿಗ ಸಿ.ಹೆಚ್ ವಿಜಯಶಂಕರ್, ಕಾಂತಾರ ಮೂಲಕ ರಾಷ್ಟ್ರಪ್ರಶಸ್ತಿ ಮುಡಿಗೇರಿಸಿಕೊಂಡ ನಟ ರಿಷಬ್ ಶೆಟ್ಟಿ, ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಸೇರಿದಂತೆ ಹಲವು ಮೂರ್ತಿಗಳನ್ನು ಗಣಪತಿಯ ಅಕ್ಕಪಕ್ಕದಲ್ಲಿ ನಿಲ್ಲಿಸಿ ವಿಭಿನ್ನ ರೀತಿಯಲ್ಲಿ ವಿಗ್ರಹಗಳನ್ನು ಕೂರಿಸಲಾಗಿದೆ.
Post a comment
Log in to write reviews