2024-12-24 07:52:17

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಬೆಳಗಾವಿ-ಮೀರಜ್ ನಡುವೆ ವಿಶೇಷ ರೈಲು ಸೇವೆ

ಬೆಂಗಳೂರು: ನಾಳೆಯಿಂದ ನವರಾತ್ರಿ ಶುರುವಾಗುತ್ತಿದೆ. ಈಗಾಗಲೇ ಸಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ಹಬ್ಬದ ಸಂಭ್ರಮ ಮನೆ ಮಾಡಿದೆ. ಸದ್ಯ ನಾಡ ಹಬ್ಬ ದಸರಾ ಹಬ್ಬ ಹಿನ್ನೆಲೆಯಲ್ಲಿ ಸಾಲು ಸಾಲು ರಜೆಗಳಿವೆ. ಶಾಲಾ ಮಕ್ಕಳಿಗೆ ನಾಳೆಯಿಂದ ದಸರಾ ರಜೆ ಆರಂಭವಾಗಿದೆ. ಈ ಮಧ್ಯೆ ರೈಲು ಪ್ರಯಾಣಿಕರಿಗೆ ನೈಋತ್ಯ ರೈಲ್ವೆ ವಲಯ ಗುಡ್ ನ್ಯೂಸ್ ನೀಡಿದೆ.  ಈ ಹಿನ್ನೆಲೆಯಲ್ಲಿ ಪ್ರಯಾಣಿಕರ ನಿರೀಕ್ಷಿತ ಹೆಚ್ಚುವರಿ ದಟ್ಟಣೆಯನ್ನು ಕಡಿಮೆಗೊಳಿಸಲು ನೈಋತ್ಯ ರೈಲ್ವೆ ವಲಯ ಬೆಳಗಾವಿ-ಮೀರಜ್ ನಡುವೆ ವಿಶೇಷ ರೈಲು ಬಿಟ್ಟಿದೆ.


ರೈಲುಗಳ ಸಂಖ್ಯೆ 07301/07302 ಬೆಳಗಾವಿ- ಮೀರಜ್-ಬೆಳಗಾವಿ ಮತ್ತು 07303/07304 ಬೆಳಗಾವಿ-ಮಿರಜ್-ಬೆಳಗಾವಿ ಕಾಯ್ದಿರಿಸದ ವಿಶೇಷ ರೈಲುಗಳ ಸಂಚಾರವನ್ನು ಅಕ್ಟೋಬರ್ 31ರವರೆಗೆ ವಿಸ್ತರಿಸಲಾಗಿದೆ. ಇದಕ್ಕೂ ಮೊದಲು ಈ ರೈಲುಗಳ ಸಂಚಾರವನ್ನು ಸೆಪ್ಟೆಂಬರ್ 30ರವರೆಗೆ ನಡೆಸಲು ಸೂಚಿಸಲಾಗಿತ್ತು. ಆದರೆ ಪ್ರಯಾಣಿಕರ ಅನುಕೂಲಕ್ಕಾಗಿ ರೈಲುಗಳ ಸಂಚಾರ ಮತ್ತಷ್ಟು ವಿಸ್ತರಿಸಲಾಗಿದೆ.
 

Post a comment

No Reviews