
ಬೆಂಗಳೂರು: ಪ್ರಯಾಣಿಕರ ದಟ್ಟಣೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕೊಂಕಣ ರೈಲ್ವೆಯು ಏಖಮುಖವಾಗಿ ಎರಡು ವಿಶೇಷ ರೈಲುಗಳುನ್ನು ಓಡಿಸಲು ನಿರ್ಧರಿಸಿದೆ. ಮಡಗಾಂವ್-ಬೆಂಗಳೂರು ಮತ್ತು ಕಾರವಾರ-ಬೆಂಗಳೂರು ಮಧ್ಯೆ ವಿಶೇಷ ರೈಲು ಓಡಿಸಲಾಗುತ್ತದೆ.
ಪ್ರಯಾಣಿಕರ ದಟ್ಟಣೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕೊಂಕಣ ರೈಲ್ವೆಯು ಏಖಮುಖವಾಗಿ ಎರಡು ವಿಶೇಷ ರೈಲುಗಳುನ್ನು ಓಡಿಸಲು ನಿರ್ಧರಿಸಿದೆ.
ರೈಲು ಸಂಖ್ಯೆ 01696 ಮಡಗಾಂವ್-ಕೆಎಸ್ಆರ್ ಬೆಂಗಳೂರು ವಿಶೇಷ ರೈಲು ಮಡಗಾಂವ್ ರೈಲು ನಿಲ್ದಾಣದಿಂದ ಜುಲೈ 30 ರಂದು ಸಾಯಂಕಾಲ 4:30ಕ್ಕೆ ಹೊರಡಲಿದ್ದು, ಮರುದಿನ ಜುಲೈ 31ರ ಸಾಯಂಕಾಲ 5:30ಕ್ಕೆ ಕೆಎಸ್ಆರ್ ಬೆಂಗಳೂರು ತಲುಪಲಿದೆ.
ರೈಲು ಸಂಖ್ಯೆ 01656 ಕಾರವಾರ-ಯಶವಂತಪುರ ವಿಶೇಷ ರೈಲು ಜುಲೈ 31 ರಂದು ಕಾರವಾರ ರೈಲು ನಿಲ್ದಾಣದಿಂದ ಬೆಳಗ್ಗೆ 5:30ಕ್ಕೆ ಹೊರಟು ಮರುದಿನ ಆಗಸ್ಟ್ 1 ರಂದು ಮಧ್ಯರಾತ್ರಿ 2:15ಕ್ಕೆ ತಲುಪಲಿದೆ.
Poll (Public Option)

Post a comment
Log in to write reviews