
ಸೌತ್ ಸೂಪರ್ ಸ್ಟಾರ್ ಅಜಿತ್ ಕುಮಾರ್ ಅವರ ಮುಂಬರುವ ಚಿತ್ರ ವಿದಾಮುಯಾರ್ಚಿ ಬಿಡುಗಡೆಗೆ ಸಜ್ಜಾಗುತ್ತಿದೆ, ಇದು ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.
ಅವರು ತಮ್ಮ ನಟನೆಗೆ ಮಾತ್ರವಲ್ಲದೇ ಕಾರು ಮತ್ತು ಬೈಕ್ ರೇಸ್ನ ಉತ್ಸಾಹಿಯಾಗಿಯೂ ಹೆಸರುವಾಸಿಯಾಗಿದ್ದಾರೆ. ಇತ್ತೀಚಿನ ಪ್ರಕಟಣೆಯ ಪ್ರಕಾರ ನಟ 2025 ರಲ್ಲಿ ರೇಸರ್ ಆಗಿ ಮರಳಲು ಸಿದ್ಧರಾಗಿದ್ದಾರೆ.
ಫೆಡರೇಶನ್ ಆಫ್ ಮೋಟಾರ್ ಸ್ಪೋರ್ಟ್ಸ್ ಕ್ಲಬ್ ಆಫ್ ಇಂಡಿಯಾ (FMSCI) ಮಾಡಿದ ಪ್ರಕಟಣೆಯ ಪ್ರಕಾರ, ಅಜಿತ್ ಕುಮಾರ್ ಮುಂದಿನ ವರ್ಷ ಯುರೋಪಿಯನ್ GT4 ಚಾಂಪಿಯನ್‌ಶಿಪ್‌ನೊಂದಿಗೆ ರೇಸಿಂಗ್‌ನಲ್ಲಿ ಪುನರಾಗಮನ ಮಾಡಲು ಸಜ್ಜರಾಗಿದ್ದಾರೆ.
FMSCI ಯ ಅಧಿಕೃತ Instagram ಹ್ಯಾಂಡಲ್ ಪೋಸ್ಟ್ ಈ ಮಾಹಿತಿಯನ್ನು ಹಂಚಿಕೊಂಡಿದೆ. ಈದರ ಮಾಹಿತಿ, ಪ್ರಕಾರ ಯುಕೆ, ಮಧ್ಯಪ್ರಾಚ್ಯ ಮತ್ತು ಯುರೋಪ್‌ನ ತಂಡಗಳೊಂದಿಗೆ ಮಾತುಕತೆಯನ್ನು ನಡೆಸಲಾಗಿದೆ.ಎಂದು ಕೇಳಿ ಬರುತ್ತಿದೆ.
ಅಜೀತ್ ಅವರು ಇದರ ಬಗ್ಗೆ ಎಲ್ಲಿಯು ಹೇಳಿ ಕೊಂಡಿಲ್ಲ ಮತ್ತು ಇದರ ಬಗ್ಗೆ ಮುಂದಿನ ದಿನಗಳಲ್ಲಿ ಈ ಬಗ್ಗೆ ಹೇಳಬಹುದು ಎಂದು ಅವರ ಅಭಿಮಾನಿಗಳೂ ಉತ್ಸಾಹದಿಂದ ಕಾಯುತ್ತಿದ್ದಾರೆ.
Poll (Public Option)

Post a comment
Log in to write reviews