ರಾಜ್ಯದ ಅಭಿವೃದ್ಧಿಗಾಗಿ ಕೊಂಚ ತೈಲ ದರ ಏರಿಕೆ ಮಾಡಲಾಗಿದೆ : ಸಿಎಂ ಸಿದ್ದರಾಮಯ್ಯ

ಬೆಂಗಳೂರು : ರಾಜ್ಯ ಅರ್ಥಿಕವಾಗಿ ಸಂಕಷ್ಟ ಎದುರಿಸುತ್ತಿದ್ದೂ ರಾಜ್ಯದ ಅಭಿವೃದ್ಧಿಗಾಗಿ ತೈಲ ದರವನ್ನ ಕೊಂಚ ಏರಿಕೆ ಮಾಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಕೃಷ್ಣ ಗೃಹಕಛೇರಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯ ಆರ್ಥಿಕವಾಗಿ ಸಾಕಷ್ಟು ಸಂಕಟ ಎದುರಿಸುತ್ತಿದೆ ಅದನ್ನು ಸರಿದೂಗಿಸುವ ನಿಟ್ಟಿನಲ್ಲಿ ಪೆಟ್ರೋಲ್ ಡೀಸೆಲ್ ಬೆಲೆಯನ್ನು 3 ರೂಪಾಯಿ ಹೆಚ್ಚಳ ಮಾಡಲಾಗಿದೆ. ಬೇರೆ ರಾಜ್ಯಕ್ಕೆ ಹೋಲಿಸಿದರೆ ಅದಕ್ಕಿಂತ ಕಡಿಮೆ ದರವಿದೆ ಎಂದರು.
ಇವತ್ತು ಬಿಜೆಪಿ ಮತ್ತು ಜೆಡಿಎಸ್ ಅವರು ಪೆಟ್ರೋಲ್ ಡೀಸೆಲ್ ಬೆಲೆ ಹೆಚ್ಚಳ ಮಾಡಿದ್ದರು ಅಂತಾ ಪ್ರತಿಭಟನೆ ಮಾಡುತ್ತಿದ್ದಾರೆ. ಇವರು ಪ್ರತಿಭಟನೆ ಮಾಡಬೇಕಿರೋದು ರಾಜ್ಯ ಸರ್ಕಾರದ ವಿರುದ್ಧ ಅಲ್ಲಾ ಕೇಂದ್ರ ಸರ್ಕಾರದ ವಿರುದ್ಧ. 2004 ರಲ್ಲಿ ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿ ಆಗಿದ್ದಾಗ ಪೆಟ್ರೋಲ್ ಡೀಸೆಲ್ ಬೆಲೆ ಕಡಿಮೆ ಮಾಡಬೇಕು ಎಂದು ಹೇಳಿಕೆ ಕೊಟ್ಟಿದ್ದರು. ಆದರೆ ಅಧಿಕಾರಕ್ಕೆ ಬಂದಮೇಲೆ ಅವರ ಹೇಳಿಕೆ ತದ್ವಿರುದ್ಧ ಆಗಿ ನಡೆದುಕೊಂಡಿದ್ದಾರೆ.
ನರೇಂದ್ರ ಮೋದಿ ಅವರು ಪ್ರಧಾನಿ ಆಗುವ ಮೊದಲು ಪೆಟ್ರೋಲ್ ಬೆಲೆ 72.26 ರೂಪಾಯಿ ಇತ್ತು ಅದನ್ನು ಅಧಿಕಾರಕ್ಕೆ ಬಂದ ನಂತರ 104 ರೂಪಾಯಿ ಮಾಡಿದರು. ಡೀಸೆಲ್ ಬೆಲೆ 57.28 ಇತ್ತು ಅದನ್ನು 92.15 ಕ್ಕೆ ಏರಿಸಿದರು.
ಮನಮೋಹನ್ ಸಿಂಗ್ ಇದ್ದಾಗ ಕ್ರಡ್ ಆಯಿಲ್ 113 ಡಾಲರ್ ಇತ್ತು. ಆದರೆ ಇಗಾ ಒಂದು ಕ್ರಡ್ ಆಯಿಲ್ ಬೆಲೆ 85 ಡಾಲರ್ ಆಗಿದೆ. ಒಂದು ಸಿಲಿಂಡರ್ ಬೆಲೆ 410 ರೂಪಾಯಿ ಇದ್ದದ್ದು ಇಗಾ ಒಂದು ಸಿಲಿಂಡರ್ ಬೆಲೆ 1000 ರೂಪಾಯಿ ಆಗಿದೆ ಇವರು ಯಾರಮೇಲೆ ಪ್ರತಿಭಟನೆ ಮಾಡಬೇಕು ನಮ್ಮ ಮೇಲಾ ಕೇಂದ್ರದ ಮೇಲಾ? ಎಂದು ಪ್ರಶ್ನೆ ಮಾಡಿದರು.
ಕೇಂದ್ರ ಸರ್ಕಾರ gst ಆದಮೇಲೆ ರಾಜ್ಯ ಸರ್ಕಾರಕ್ಕೆ ಟ್ಯಾಕ್ಸ್ ಕಡಿಮೆ ಮಾಡುವ ಅವಕಾಶ ಆಯಿತು ನಮಗೆ ಸ್ಟ್ಯಾಂಪ್ ಡ್ಯೂಟಿ ಅಬಕಾರಿ ಸುಂಕ ಇದನ್ನ ಬಿಟ್ಟು ಬೇರೇನೂ ಇಲ್ಲಾ. ರಾಜ್ಯ ಸರ್ಕಾರಕ್ಕೆ ಇರೋದು ಪೆಟ್ರೋಲ್ ಡೀಸೆಲ್ ಸೇಲ್ಸ್ ಟ್ಯಾಕ್ಸ್ ಹೆಚ್ಚಿಗೆ ಹಾಕುವ ಅವಕಾಶ ಮಾತ್ರ ಆಗಾಗಿ ಕೊಂಚ ತೈಲ ಬೆಲೆ ಏರಿಕೆ ಮಾಡಿ ಆರ್ಥಿಕ ಸಂಕಸ್ಟದಿಂದ ರಾಜ್ಯವನ್ನ ಕಾಪಾಡುವ ಪ್ರಯತ್ನ ನಮ್ಮದು ಎಂದರು.
Poll (Public Option)

Post a comment
Log in to write reviews