ರಾಜಕೀಯ
ಶಿವರಾಮೇಗೌಡ ಪ್ರತಿಕೃತಿಗೆಯನ್ನು ಮರಕ್ಕೆ ನೇಣು, ಡಿಕೆಶಿ ವಿರುದ್ಧ ಧಿಕ್ಕಾರದ ಕೂಗು : ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ

ಬೆಂಗಳೂರು: ದೇವೇಗೌಡ ವಿರುದ್ಧ ವೈಯಕ್ತಿಕವಾಗಿ ಅವಹೇಳನಕಾರಿ ಹೇಳಿಕೆ ಖಂಡಿಸಿ ಡಿಕೆಶಿ ಹಾಗು ಶಿವರಾಮೇಗೌಡ ವಿರುದ್ಧ ಇಂದು ಜೆಡಿಎಸ್ ಕಾಯ೯ಕತ೯ರು ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸಿದರು.
ಡಿಕೆಶಿ ಪಿತೂರಿ ಹಾಗು ಕುಮ್ಮಕ್ಕಿನಿಂದ, ಎಲ್ ಆರ್ ಶಿವರಾಮೇಗೌಡ ಅವರು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ, ಬೆಂಗಳೂರು ನಗರದ ಜೆಡಿಎಸ್ ಅಧ್ಯಕ್ಷ ಹೆಚ್ಎಂರಮೇಶ್ ಗೌಡ ನೇತೃತ್ವದಲ್ಲಿ ಪ್ರತಿಭಟನೆಯನ್ನು ಮಾಡಿದರು.
ಈ ವೇಳೆ ಕಾಯ೯ಕತರು ಶಿವರಾಮೇಗೌಡ ಪ್ರತಿಕೃತಿಗೆಯನ್ನು ಮರಕ್ಕೆ ನೇಣು ಹಾಕಿ, ಪ್ರತಿಕೃತಿಗೆ ಪೊರಕೆಯಿಂದ ಹೊಡೆದು ಮತ್ತು ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದಾರೆ. ಕಾಂಗ್ರೆಸ್ ಸಕಾ೯ರದ ವಿರುದ್ಧ ಹಾಗು ಡಿಕೆಶಿ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನೆ ಮಾಡಿದ್ದಾರೆ.
Poll (Public Option)

Post a comment
Log in to write reviews