ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಹಾಗೂ ಐಪಿಎಸ್ ಅಧಿಕಾರಿ ಎಸ್ಐಟಿ ಐಜಿ ಚಂದ್ರಶೇಖರ್ ರನ್ನ ಕೆಣಕಿ ತಮ್ಮ ಕಲ್ಲ ಮೇಲೆ ತಾವೇ ಚಪ್ಪಡಿ ಎಳೆದುಕೊಂಡಿದ್ದಾರೆ. ಹೌದು 2006 ರಿಂದ 2008 ರ ಅವಧಿಯಲ್ಲಿ ಹೆಚ್‌ಡಿಕೆ ಸಿಎಂ ಆಗಿದ್ದ ಸಂದರ್ಭದಲ್ಲಿ ಬಳ್ಳಾರಿಯಲ್ಲಿ ಅಕ್ರಮವಾಗಿ 550 ಎಕರೆ ಭೂಮಿ ಮಂಜೂರು ಮಾಡಿದ್ದ ಆರೋಪದಲ್ಲಿ ಕ್ರೈಂ ಕೇಸ್ ನಂ.16/14 ದಾಖಲಾಗಿದೆ.
ಸದ್ಯ ಪ್ರಕರಣದಲ್ಲಿ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಜಾಮೀನಿನ ಮೇಲೆ ಹೊರಗಿದ್ದಾರೆ. ಆದ್ರೆ ಇದೀಗ ಎಸ್ಐಟಿ ಈ ಪ್ರಕರಣದಲ್ಲಿ ಜಾಮೀನು ರದ್ದು ಕೋರಿ ಕೋರ್ಟ್ ಮೊರೆ ಹೋಗಲು ಮುಂದಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಈಗಾಗಲೇ ಈ ಅಕ್ರಮ ಭೂಮಿ ಮಂಜೂರಾತಿ ಪ್ರಕರಣದಲ್ಲಿ ತನಿಖೆ ನಡೆದು, ವಿಚಾರಣೆಗಳು ಜರುಗಿ ಸದ್ಯ ಕುಮಾರಸ್ವಾಮಿ ಜಾಮೀನು ಪಡೆದು ಪಾರಾಗಿದ್ದರು. ಇದೀಗ ಕೇಂದ್ರ ಸಚಿವ ಕುಮಾರಸ್ವಾಮಿ ಮತ್ತು ಎಡಿಜಿಪಿ ಚಂದ್ರಶೇಖರ್ ನಡುವಿನ ಸಮರ ತಾರಕ್ಕೇರಿರುವ ಹಿನ್ನಲೆ, ಕುಮಾರಸ್ವಾಮಿ ಜಾಮಿನನ್ನ ರದ್ದು ಮಾಡುವಂತೆ ಕೋರಿ ಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದ್ದು, ಒಂದು ವೇಳೆ ಜಾಮೀನು ರದ್ದಾದ್ರೆ ಕುಮಾರಸ್ವಾಮಿಗೆ ಬಂಧನ ಭೀತಿ ಎದುರಾಗಲಿದೆ.
Post a comment
Log in to write reviews