
ಲೈಂಗಿಕ ಕೇಸ್ ಪ್ರಕರಣದಲ್ಲಿ ತಲೆ ಮರೆಸಿಕೊಂಡಿರುವ ಸಂಸದ ಪ್ರಜ್ವಲ್ ರೇವಣ್ಣ ಸದ್ಯ ಲಂಡನ್ ನಲ್ಲಿ ಇದ್ದಾರೆ ಎನ್ನಲಾಗಿದೆ.
ಪ್ರಜ್ವಲ್ ರೇವಣ್ಣನವರ ಬ್ಯಾಂಕ್ ಖಾತೆಗೆ ಭಾರತದಿಂದ ಹಣ ಟ್ರಾನ್ಸ್ಫರ್ ಮಾಡಲಾಗಿದೆ ಪ್ರಜ್ವಲ್ ರೇವಣ್ಣರೊಂದಿಗೆ ಇಬ್ಬರು ಸ್ನೇಹಿತರು ಕೂಡ ಇದ್ದು, ಅದರಲ್ಲಿ ಒಬ್ಬರು ಬೆಂಗಳೂರಿನವರು, ಮತ್ತೊಬ್ಬರು ದುಬೈ ಮೂಲದವರು ಎನ್ನಲಾಗಿದೆ.
ಇನ್ನು ಪ್ರಜ್ವಲ್ ಬ್ಯಾಂಕ್ ಖಾತೆ ಬಂದ್ ಮಾಡುವ ಸಲುವಾಗಿ ಕೋರ್ಟ್‌ನಿಂದ ಅನುಮತಿ ಪಡೆದುಕೊಳ್ಳುಲು ಎಸ್‌ಐಟಿ ಅಧಿಕಾರಿಗಳು ಮುಂದಾಗಿದ್ದಾರೆ. ಇನ್ನೂ ಹಲವು ಮಂದಿ ವಿದೇಶದಲ್ಲಿ ಅವರಿಗೆ ಸಹಾಯ ನೀಡುತ್ತಿರುವುದು ಈಗ ಎಸ್‌ಐಟಿ ಅಧಿಕಾರಿಗಳಿಗೆ ತಲೆನೋವಾಗಿದೆ. ಹಾಸನ ಮೂಲದ ಉದ್ಯಮಿಯೊಬ್ಬರು, ಸದ್ಯ ಲಂಡನ್‌ನಲ್ಲಿದ್ದು ಅವರು ಪ್ರಜ್ವಲ್ ಅವರಿಗೆ ಸಹಾಯ ಮಾಡಿದ್ದಾರೆ ಎನ್ನಲಾಗಿದೆ.
Poll (Public Option)

Post a comment
Log in to write reviews