
ಶತ್ರು ಭೈರವಿ ಯಾಗ ಮಾಡಿಸಿರುವ ಸಂಬಂಧ ಎಸ್‌ಐಟಿ ರಚನೆ ಮಾಡಿ ತನಿಖೆ ನಡೆಸಲಿ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಡಿಕೆಶಿ ಅವರ ಹೇಳಿಕೆ ಗಮಸಿಸದ್ದೇನೆ. ಅದೇನೋ 21 ಕರಿ ಮೇಕೆ, ಕೋಣ ಅಂತ ಶತ್ರು ಭೈರವಿಯಾಗ ಮಾಡಿದ್ದಾರೆ ಎಂದಿದ್ದಾರೆ. ಆ ರೀತಿ ಯಾಗ ಮಾಡುವುದಿದ್ದರೆ ಕಷ್ಟ ಯಾಕೆ ಪಡಬೇಕು ಎಂದು ಪ್ರಶ್ನಿಸಿರುವ ಅವರು, ಡಿಸಿಎಂ ಆಗಿ ಇಂತಹ ಹೇಳಿಕೆಕೊಟ್ಟಿದ್ದಾರೆ. ಅವರಿಗೆ ಆ ಸ್ಥಾನದ ಮೌಲ್ಯ ಇನ್ನು ಅರ್ಥ ಆಗಿಲ್ಲ ಎಂದರು. ಲೋಕದ ಡೊಂಕನ್ನ ನೀವೇಕೆ ತಿದ್ದುವಿರಿ ಎಂದು ಪರೋಕ್ಷವಾಗಿ ಡಿಕೆಶಿಗೆ ಹೇಳಿದರಲ್ಲದೆ, ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡಬೇಕು. ಅವರು ದೈವ ಭಕ್ತರಂತೆ. ರಾಜರಾಜೇಶ್ವರಿ ದೇವಸ್ಥಾನದಲ್ಲಿ ಅವರು ಯಾವ ರೀತಿ ಪೂಜೆ ಸಲ್ಲಿಸುತ್ತಾರೆ ಎಂಬುದು ನಮಗೆ ಗೊತ್ತಿದೆ ಎಂದರು. ನಮ್ಮ ಕುಟುಂಬ ಮುಗಿಸಲು ನಾಲ್ಕು ತಿಂಗಳಿಂದ ಕಸರತ್ತು ನಡೆಸುತ್ತಿದ್ದಾರೆ. ನಮ್ಮ ಕುಟುಂಬದಲ್ಲಿ ಕುರಿ, ಮೇಕೆ ಕಡಿಯುವ ಸಂಸ್ಕೃತಿ ಇಲ್ಲ. ದೇವೇಗೌಡರು ಜೆಪಿ ನಗರದ ವೆಂಕಟೇಶ್ವರ ದೇವಸ್ಥಾನಕ್ಕೆ ಪ್ರತಿ ತಿಂಗಳು ಬೆಳಗ್ಗೆ 5 ಗಂಟೆಗೆ ಹೋಗುತ್ತಾರೆ. ನಮ್ಮ ಜೀವನ ಉತ್ತಮ ಆಗಲಿ ಎಂದು ನಾವು ಪೂಜೆ ಮಾಡುತ್ತೀವಿ. ಆ ರೀತಿ ಯಾಗ ಮಾಡುವುದಿದ್ದರೆ ಕಷ್ಟ ಯಾಕೆ ಪಡಬೇಕು ಎಂದು ಪ್ರಶ್ನಿಸಿದರು.
Poll (Public Option)

Post a comment
Log in to write reviews