
ಬೆಂಗಳೂರು: ಪೆನ್ ಡ್ರೈವ್ ಪ್ರಕರಣ ಸಂಬಂಧ ಪ್ರಜ್ವಲನ ಪ್ರೇಯಸಿಗೂ ಕಂಟಕ ಎದುರಾಗಿದ್ದು, ವಿವರಣೆ ನೀಡುವಂತೆ ಎಸ್‌ಐಟಿ ನೋಟಿಸ್ ಜಾರಿ ಮಾಡಿದೆ.
ಪೆನ್‌ಡ್ರೈವ್ ಪ್ರಕರಣದಲ್ಲಿ ಈಗಾಗಲೇ ಪ್ರಜ್ವಲ್ ರೇವಣರನ್ನು ಎಸ್‌ಐಟಿ ಕಸ್ಟಡಿಗೆ ತೆಗೆದುಕೊಂಡಿದ್ದು, ಇದೀಗ ಆತನ ನ ಪ್ರೇಯಸಿಗೂ ನೋಟಿಸ್ ಜಾರಿಯಾಗಿದೆ. ವಿದೇಶದಲ್ಲಿರುವಾಗ ಪ್ರಜ್ವಲ್ ಗೆ ಆತನ ಪ್ರೇಯಸಿ ಸಹಾಯ ಮಾಡಿರುವ ಬಗ್ಗೆ ಎಸ್‌ಐಟಿ ಮಾಹಿತಿ ಕಲೆ ಹಾಕಿದೆ. ಪ್ರಜ್ವಲ್‍ಗೆ ವಿದೇಶದಲ್ಲಿರುವಾಗ ಸಹಾಯ ಮಾಡಿರೋ ಬಗ್ಗೆ ಎಸ್‌ಐಟಿ ಅಧಿಕಾರಿಗಳ ಬಳಿ ಮಹತ್ವದ ದಾಖಲೆಗಳಿದೆ ಎನ್ನಲಾಗಿದೆ. ಅಲ್ಲದೆ ವಿದೇಶದಲ್ಲಿದ್ದಾಗ ಹಣದ ಸಹಾಯ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನಲೆ ಆಕೆಗೆ ಅಧಿಕಾರಿಗಳು ನೋಟಿಸ್ ಅನ್ನು ನೀಡಿ ವಿವರ ಕೋರಿದ್ದಾರೆ ಎನ್ನಲಾಗಿದೆ.
Poll (Public Option)

Post a comment
Log in to write reviews