
ಪ್ರಜ್ವಲ್ ರೇವಣ್ಣ ಭಾರತಕ್ಕೆ ವಾಪಸ್ ಬರುತ್ತಿದ್ದಂತೆ ಎಸ್‌ಐಟಿ (SIT) ವಶಕ್ಕೆ ಪಡೆಯಲಿದ್ದು, ಅದಕ್ಕೆ ಬೇಕಾದ ಎಲ್ಲಾ ಕಾನೂನಾತ್ಮಕ ಸಿದ್ಧತೆಗಳನ್ನು ಮಾಡಿಕೊಂಡಿದೆ.
ಒಂದು ವೇಳೆ ಭಾರತಕ್ಕೆ ವಾಪಸ್ ಬರದೇ ಇದ್ದರೆ ಆಗ ಇಂಟರ್‌ಪೋಲ್ (inter poll) ಸಹಾಯದ ಮೂಲಕ ಬಂಧನ ಮಾಡಲು ವಿಶೇಷ ತನಿಖಾ ದಳ ಪ್ಲಾನ್ ಮಾಡಿದೆ. ಪ್ರಜ್ವಲ್ ರೇವಣ್ಣ ವಿರುದ್ಧ ಎರಡು ಕೇಸ್‌ಗಳು ದಾಖಲಾಗಿವೆ. ವಿಚಾರಣೆಗೆ ಹಾಜರಾಗುವಂತೆ ಈಗಾಗಲೇ ಮೂರು ನೋಟಿಸ್ (Notice) ಜಾರಿ ಮಾಡಲಾಗಿದೆ. ಆದ್ರೆ ಪ್ರಜ್ವಲ್ ರೇವಣ್ಣ ಸದ್ಯ ವಿದೇಶದಲ್ಲಿದ್ದು ವಿಚಾರಣೆಗೆ ಹಾಜರಾಗಿಲ್ಲ.
ಈ ನಡುವೆ ಮತ್ತೊಂದು ರೇಪ್ ಕೇಸ್ ಕೂಡ ಪ್ರಜ್ವಲ್ ವಿರುದ್ಧ ದಾಖಲಾಗಿದ್ದು, IPC ಸೆಕ್ಷನ್ 376 ಅಡಿಯ ಅತ್ಯಾಚಾರ ಕೇಸ್‌ನಲ್ಲಿ ಸಂತ್ರಸ್ತೆ ಹೇಳಿಕೆ ದಾಖಲಾಗಿದೆ. ಪ್ರಜ್ವಲ್‌ಗೆ ಶರಣಾಗೋದು ಬಿಟ್ಟು ಸದ್ಯಕ್ಕೆ ಬೇರೆ ಆಯ್ಕೆಗಳಿಲ್ಲವೆಂಬ ಚರ್ಚೆ ಜೋರಾಗಿದೆ
Poll (Public Option)

Post a comment
Log in to write reviews