ಹುಬ್ಬುಗಳು ಮುಖದ ಸೌಂದರ್ಯವನ್ನು ಹೆಚ್ಚಿಸುತ್ತದೆ. ಮುಖಕ್ಕೆ ಎಷ್ಟೇ ಮೇಕಪ್ ಹಚ್ಚಿದರೂ ಕೂಡ ಹುಬ್ಬು ತೆಳುವಾಗಿದ್ದರೆ ಮುಖದ ಸೌಂದರ್ಯ ಆಕರ್ಷಕವಾಗಿ ಕಾಣುವುದಿಲ್ಲ. ಆದರೆ ಕೆಲವರು ಹುಬ್ಬುಗಳಿಗೆ ಐಬ್ರೋ ಪೆನ್ಸಿಲ್ ಬಳಸಿ ದಪ್ಪವಾಗಿ ಕಾಣುವಂತೆ ಮಾಡುತ್ತಾರೆ. ಆದರೆ ಇದರಿಂದ ನಿಮ್ಮ ಮುಖದ ಸೌಂದರ್ಯ ನೈಸರ್ಗಿಕವಾಗಿ ಕಾಣುವುದಿಲ್ಲ. ಹಾಗಾಗಿ ಸೌಂದರ್ಯದ ವಿಚಾರಕ್ಕೆ ಬಂದರೆ ಹುಬ್ಬಗಳು ಬಹಳ ಮುಖ್ಯವಾದ ಪಾತ್ರವಹಿಸುತ್ತವೆ.
ಹಾಗಾಗಿ ನಿಮ್ಮ ಹುಬ್ಬುಗಳನ್ನು ಆರೋಗ್ಯವಾಗಿ ನೋಡಿಕೊಳ್ಳುವುದು ಅವಶ್ಯಕವಾಗಿದೆ. ಕೆಲವರು ಹುಬ್ಬುಗಳ ಬಗ್ಗೆ ಹೆಚ್ಚು ಕಾಳಜಿವಹಿಸುವುದಿಲ್ಲ. ಹಾಗಾಗಿ ಹುಬ್ಬುಗಳು ದಿನೇ ದಿನೇ ತೆಳುವಾಗುತ್ತಾ ಹೋಗುತ್ತದೆ. ಇದು ನಿಮ್ಮ ಸೌಂದರ್ಯವನ್ನು ಕೆಡಿಸುತ್ತಿದೆ. ಅಲ್ಲದೇ ಮುಖಕ್ಕೆ ಕೆಲವು ರಾಸಾಯನಿಕಯುಕ್ತ ಮೇಕಪ್ಗಳು, ಫೇಸ್ವಾಶ್ , ಸೋಪ್ಗಳನ್ನು ಬಳಸುವುದರಿಂದ ಹುಬ್ಬುಗಳ ಕೂದಲು ಬಹಳ ಬೇಗನೆ ಹಾನಿಗೊಳಗಾಗುತ್ತದೆ. ಇದರಿಂದ ಹುಬ್ಬಿನ ಕೂದಲು ಉದುರಿ ಹೋಗಿ ತೆಳುವಾಗುತ್ತದೆ. ಹಾಗೇ ಹುಬ್ಬುಗಳನ್ನು ಸರಿಯಾಗಿ ಆರೈಕೆ ಮಾಡದಿದ್ದಾಗ ಅದರಲ್ಲಿ ಹೊಟ್ಟುಗಳು, ಚಿಕ್ಕಚಿಕ್ಕ ಗುಳ್ಳೆಗಳು ಉಂಟಾಗಿ ಅದರ ಕೂದಲು ಉದುರಿ ಹೋಗುತ್ತದೆ. ಹುಬ್ಬುಗಳು ಆರೋಗ್ಯಕರವಾಗಿ ಬೆಳೆಯಲು ನೀವು ರಾತ್ರಿ ಮಲಗುವ ಮುನ್ನ ಹುಬ್ಬುಗಳಿಗೆ ಈ ರೀತಿಯಲ್ಲಿ ಆರೈಕೆ ಮಾಡಿ.
ಹುಬ್ಬುಗಳು ಸರಿಯಾಗಿ ಸ್ವಚ್ಛಗೊಳಿಸಿ
ಪ್ರತಿದಿನ ಹೊರಗಡೆ ಓಡಾಡುವುದರಿಂದ ಹುಬ್ಬುಗಳ ಮೇಲೆ ಕೊಳೆ, ಧೂಳು ಸೇರಿಕೊಂಡು ಹುಬ್ಬುಗಳ ಕೂದಲು ಉದುರಿ ಹೋಗುತ್ತದೆ. ಹಾಗಾಗಿ ಪ್ರತಿದಿನ ರಾತ್ರಿ ಮಲಗುವ ಮುನ್ನ ಹುಬ್ಬುಗಳನ್ನು ಚೆನ್ನಾಗಿ ಸ್ವಚ್ಛ ಮಾಡಿ. ಹುಬ್ಬುಗಳ ಮೇಲಿರುವ ಕೊಳೆ, ಎಣ್ಣೆಯಂಶ, ಧೂಳು, ಮೇಕಪ್ ಅನ್ನು ತೆಗೆದುಹಾಕಲು ಹರ್ಬಲ್ ಸೋಪ್ನಿಂದ ಮುಖವನ್ನು ಚೆನ್ನಾಗಿ ಸ್ವಚ್ಛ ಮಾಡಿ ನಂತರ ಉಗುರು ಬೆಚ್ಚಗಿರುವ ನೀರಿನಿಂದ ಮುಖವನ್ನು ತೊಳೆಯಿರಿ.
ಹುಬ್ಬುಗಳನ್ನು ಎಕ್ಸ್ ಫೋಲಿಯೇಟಿಂಗ್ ಮಾಡಿ
ಹುಬ್ಬುಗಳಲ್ಲಿ ಸತ್ತ ಚರ್ಮಗಳು ಸಂಗ್ರಹವಾಗುತ್ತದೆ. ಇದರಿಂದ ಅಲ್ಲಿ ಹೊಸ ಕೂದಲುಗಳು ಬೆಳೆಯಲು ಆಗುವುದಿಲ್ಲ. ಹಾಗಾಗಿ ಈ ಸತ್ತ ಚರ್ಮಕೋಶಗಳನ್ನು ತೆಗೆದುಹಾಕುವುದು ಅನಿರ್ವಾಯವಾಗುತ್ತದೆ. ಹಾಗಾಗಿ ನೀವು ಪ್ರತಿದಿನ ರಾತ್ರಿ ಮಲಗುವ ಮುನ್ನ ಹುಬ್ಬುಗಳನ್ನು ಎಕ್ಸ್ ಫೋಲೀಯೆಂಟಿಂಗ್ ಮಾಡಿ. ಅದಕ್ಕಾಗಿ ನೀವು ಓಟ್ ಮೀಲ್, ಕಾಫಿ ಪುಡಿಗಳನ್ನು ಬಳಸಬಹುದು. ಇದು ಸತ್ತ ಚರ್ಮ ಗಳನ್ನು ನಿವಾರಿಸಿ ಹುಬ್ಬುಗಳಲ್ಲಿ ರಕ್ತ ಸಂಚಾರ ಸರಾಗವಾಗಿ ಆಗುವಂತೆ ಮಾಡುತ್ತದೆ.
ಹುಬ್ಬುಗಳಿಗೆ ಎಣ್ಣೆಯ ಮಸಾಜ್
- ಹುಬ್ಬುಗಳು ಆರೋಗ್ಯವಾಗಿ ಬೆಳೆಯಲು ಎಣ್ಣೆಯ ಮಸಾಜ್ ಅಗತ್ಯವಾಗಿ ಬೇಕಾಗುತ್ತದೆ. ಇದು ಕೂದಲಿನ ಬುಡಗಳಿಗೆ ಪೋಷಣೆ ನೀಡುತ್ತದೆ ಮತ್ತು ಬೆಳವಣಿಗೆಗೆ ಬೇಕಾದ ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತದೆ. ಹಾಗಾಗಿ ಹುಬ್ಬುಗಳ ಕೂದಲು ದಪ್ಪವಾಗಿ ಬೆಳೆಯುತ್ತದೆ.
- ಅದಕ್ಕಾಗಿ ನೀವು ತೆಂಗಿನೆಣ್ಣೆ, ಜೊಜೊಬಾ ಆಯಿಲ್, ಆಲಿವ್ ಆಯಿಲ್, ಹರಳೆಣ್ಣೆ ಮುಂತಾದ ಎಣ್ಣೆಗಳನ್ನು ಬಳಸಬಹುದು. ರಾತ್ರಿ ಮಲಗುವ ಮುನ್ನ ಈ ಎಣ್ಣೆಗಳಲ್ಲಿ ಒಂದನ್ನು ತೆಗೆದುಕೊಂಡು ಸ್ವಲ್ಪ ಬಿಸಿ ಮಾಡಿ ಅದರಲ್ಲಿ ಕೆಲವು ಹನಿಯನ್ನು ಹುಬ್ಬುಗಳಿಗೆ ಹಚ್ಚಿ ಮಸಾಜ್ ಮಾಡಿ. ಇದು ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ.
- ಹುಬ್ಬುಗಳನ್ನು ಆಗಾಗ ಬಾಚಿಕೊಳ್ಳಿ ಮತ್ತು ಸರಿಯಾದ ಆಕಾರ ನೀಡಿ
- ಹುಬ್ಬುಗಳು ಆರೋಗ್ಯವಾಗಿ ಬೆಳೆಯಲು ತಲೆ ಕೂದಲನ್ನು ಬಾಚಿಕೊಳ್ಳುವಂತೆ ಐಬ್ರೋ ಬ್ರಷ್ ನಿಂದ ಹುಬ್ಬುಗಳನ್ನು ಆಗಾಗ ಬಾಚಿಕೊಳ್ಳಬೇಕಾಗುತ್ತದೆ. ಯಾಕೆಂದರೆ ಇದು ಕೂದಲಿನ ಬುಡದಲ್ಲಿ ರಕ್ತ ಸಂಚಾರಕ್ಕೆ ಸಹಾಯ ಮಾಡುತ್ತದೆ.
- ಇದರಿಂದ ಕೂದಲಿನ ಕಿರುಚೀಲಗಳಿಗೆ ಉತ್ತಮವಾದ ಆಮ್ಲಜನಕ ಸಿಗುತ್ತದೆ. ಇದರಿಂದ ಕೂದಲು ಚೆನ್ನಾಗಿ ಬೆಳೆಯುತ್ತದೆ ಮತ್ತು ಆರೋಗ್ಯವಾಗಿರುತ್ತದೆ. ಹಾಗೇ ಹುಬ್ಬುಗಳನ್ನು ಕತ್ತರಿಸುವ ಮೂಲಕ ಸರಿಯಾದ ಆಕಾರಗಳನ್ನು ನೀಡಿ. ಇದು ನಿಮ್ಮಸೌಂದರ್ಯವನ್ನು ಹೆಚ್ಚಿಸುತ್ತದೆ ಮತ್ತು ಹುಬ್ಬಿನ ಕೂದಲು ಬೆಳೆಯಲು ಪ್ರಚೋದಿಸುತ್ತದೆ.
Post a comment
Log in to write reviews