
ರಾಯಚೂರು: ಪ್ರೆಸ್ ಕ್ಲಬ್‌ನಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮುಡಾ ಹಗರಣ ಮುಂದಿಟ್ಟುಕೊಂಡು ಬಿಜೆಪಿ–ಜೆಡಿಎಸ್ ನಾಯಕರು ಪಾದಯಾತ್ರೆ ಮಾಡುವ ಮೂಲಕ ಸಿದ್ದರಾಮಯ್ಯನವರಿಗೆ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾರೆ ಎಂದು ರಾಯಚೂರು ಕಾಂಗ್ರೆಸ್ ಮಹಿಳಾ ಘಟಕದ ಮುಖಂಡರಾದ ಶ್ರೀದೇವಿ ನಾಯಕ ಆರೋಪಿಸಿದರು.
“ಸಿದ್ದರಾಮಯ್ಯನವರ ಪತ್ನಿಯ ನಿವೇಶನ ಮುಡಾದಿಂದ ಬೇರೆಯವರಿಗೆ ಹಂಚಿಕೆ ಮಾಡಿದೆ. ಆನಂತರ ಬಿಜೆಪಿಯೇ ರೂಪಿಸಿದ 50;50 ಅನುಪಾತದ ನಿಯಮದ ಪ್ರಕಾರವೂ ಪರಿಹಾರ ನೀಡದೇ ಶೇ 38 ರಷ್ಟು ಮಾತ್ರ ಪರಿಹಾರ ನೀಡಿದ್ದಾರೆ. ಸಿದ್ದರಾಮಯ್ಯನವರ ಪತ್ನಿ ಪಾರ್ವತಿಯವರಿಗೆ ಅನ್ಯಾಯವಾದರೂ ಸಿದ್ದರಾಮಯ್ಯನವರ ವಿರುದ್ಧ ಹೋರಾಟ ಮಾಡಿ ಅವರ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ” ಎಂದು ಆರೋಪಿಸಿದರು.
ಮುಡಾ ಹಗರಣಕ್ಕೆ ಸಂಬಂಧಿಸಿ ಸಾಮಾಜಿಕ ಕಾರ್ಯಕರ್ತರ ದೂರಿಗೆ ಸ್ಪಂದಿಸಿ ರಾಜ್ಯಪಾಲರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ನೊಟೀಸ್ ನೀಡಿದ್ದು ಖಂಡನೀಯ. ರಾಜ್ಯಪಾಲರು ಬಿಜೆಪಿಯ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಪಕ್ಷದ ಪದಾಧಿಕಾರಿಗಳಾದ ಮಂಜುಳಾ ಅಮರೇಶ, ಶಶಿಕಲಾ ಭೀಮರಾಯ, ಪ್ರೇಮಲತಾ, ಖಾಸಿಂಬೀ, ಭಾರತಿ ಇದ್ದರು.
Poll (Public Option)

Post a comment
Log in to write reviews