ಶಿರಾಡಿ ಘಾಟಿಗೆ ಸಿದ್ದರಾಮಯ್ಯ ಭೇಟಿ: ಭೂ ಕುಸಿತದ ಬಗ್ಗೆ ಸ್ಥಳೀಯರ ಅಭಿಪ್ರಾಯ ಕೇಂದ್ರಕ್ಕೆ ತಿಳಿಸುತ್ತೇನೆ
ಹಾಸನ : ಜಿಲ್ಲೆಯ ಸಕಲೇಶಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟಿನಲ್ಲಿ (Shiradi ghat) ಪದೇ ಪದೆ ಭೂಕುಸಿತ ಹಿನ್ನೆಲೆ ಗುಡ್ಡ ಕುಸಿತ ಪ್ರದೇಶಕ್ಕೆ ಸಿಎಂ ಸಿದ್ದರಾಮಯ್ಯ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಶಿರಾಡಿ ಘಾಟಿಯ ಹಲವೆಡೆ ಗುಡ್ಡ ಕುಸಿತ ಪ್ರದೇಶಗಳನ್ನು ಪರಿಶೀಲಿಸಿದ ನಂತರ ಸಿಎಂ, ಅಧಿಕಾರಿಗಳಿಂದ ಹೆಚ್ಚಿನ ಮಾಹಿತಿ ಪಡೆದುಕೊಂಡಿದ್ದಾರೆ. ಬಳಿಕ ಮಾತನಾಡಿ ಅವರು, ರಾಷ್ಟ್ರೀಯ ಹೆದ್ದಾರಿ 75ರ ಮೇಲ್ಭಾಗದಲ್ಲಿ ಮಣ್ಣು ಸಡಿಲವಾಗಿದೆ. ಹೀಗಾಗಿ ಪದೇಪದೇ ಕುಸಿಯುತ್ತಿದೆ, ಇದು ಅವೈಜ್ಞಾನಿಕ ಕಾಮಗಾರಿ ಹಾಗೂ ಭೂಕುಸಿತವಾಗುತ್ತಿದೆ. ಸ್ಥಳೀಯರ ಅಭಿಪ್ರಾಯವನ್ನು ಕೇಂದ್ರ ಸಚಿವರಿಗೆ ತಿಳಿಸುತ್ತೇನೆ ಎಂದು ಹೇಳಿದರು..
ಸಕಲೇಶಪುರ ಭಾಗದಲ್ಲಿ ವಾಡಿಕೆಗಿಂತ ಶೇ.65ರಷ್ಟು ಹೆಚ್ಚು ಮಳೆ ಆಗಿದೆ. ಶಿರಾಡಿಘಾಟ್ನಲ್ಲಿ ಹೆದ್ದಾರಿ ಸರಿಪಡಿಸುವಂತೆ ಕೇಂದ್ರಕ್ಕೆ ಪತ್ರ ಬರೆಯುವೆ. ದೆಹಲಿಗೆ ಹೋದಾಗ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿಗೆ ಮನವರಿಕೆ ಮಾಡುವೆ ಎಂದು ತಿಳಿಸಿದರು.
ಶಿರಾಡಿಘಾಟ್ ನಲ್ಲಿ ಮಣ್ಣು ಕುಸಿತದಿಂದ ವಾಹನ ಸಂಚಾರಕ್ಕೆ ಅಡ್ಡಿ ಆಗಿದೆ. 1 ಎಸ್ಡಿಆರ್ಎಫ್ ಟೀಮ್ ಇಲ್ಲೇ ನಿಯೋಜನೆ ಮಾಡಿದ್ದೇವೆ. ಬೇಕಿದ್ದರೆ ಹೆಚ್ಚಿನ ಭದ್ರತೆ ವಹಿಸುತ್ತೇವೆ. ಯಾಕೆ ಭೂ ಕುಸಿತ ಆಗುತ್ತಿದೆ ಎಂಬುದದರ ಬಗ್ಗೆ ವಿಚಾರಿಸಿ ಕ್ರಮ ವಹಿಸುತ್ತೇವೆ ಎಂದು ಹೇಳಿದರು.
Post a comment
Log in to write reviews