
ಮೈಸೂರು: ರಾಜಕಾರಣದಿಂದ ಯಾರು ನಿವೃತ್ತಿ ಆಗುತ್ತಾರೆ ಎಂಬುದು ಕೆಲವೇ ದಿನಗಳಲ್ಲಿ ಗೊತ್ತಾಗುತ್ತದೆ. ಸಿದ್ದರಾಮಯ್ಯ ಮನೆಗೆ ಹೋಗುವ ಕಾಲ ಹತ್ತಿರವಾಗಿದೆ’ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಟೀಕಿಸಿದರು.
ಮುಡಾದಲ್ಲಿ ಅಕ್ರಮ ಖಂಡಿಸಿ ಬಿಜೆಪಿ, ಜೆಡಿಎಸ್ ಪಾದಯಾತ್ರೆಗೆ ಭಾಗಿಯಾಗಲು ಮೈಸೂರಿಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಆಗಮಿಸಿದ್ದು ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ ಸಿದ್ದರಾಮಯ್ಯ ಅವರು ಹೇಳಬೇಕು ಪಾಪ. ಅವರು ನಿವೃತ್ತಿ ತಗೊಂಡು ಮನೆಗೆ ಹೋಗುವಾಗ ಇನ್ನೊಬ್ಬರ ಬಗ್ಗೆ ಹೇಳೋದು ಸ್ವಾಭಾವಿಕ. ಯಾರು ನಿವೃತ್ತಿಯಾಗ್ತಾರೆ, ಏನ್ ಆಗ್ತಾರೆ ಅನ್ನೊದು ಮುಂದೆ ಗೊತ್ತಾಗುತ್ತದೆ ಎಂದರು.
ಪೊಕ್ಸೋ ಕೇಸ್ ನಲ್ಲಿ ನಾಳೆ ಕೋರ್ಟ್ ನಲ್ಲಿ ತೀರ್ಮಾನ ಆದಾಗ ಎಲ್ಲಾ ಬಹಿರಂಗವಾಗುತ್ತೆ. ಅಲ್ಲಿಯವರೆಗೆ ನಾನು ಏನು ಮಾತಾಡಲ್ಲ. ಅದಾದ ಬಳಿಕ ಸಿದ್ದರಾಮಯ್ಯಗೆ ಉತ್ತರ ಸಿಗುತ್ತೆ. ಅವರು ಈಗ ಮನಬಂದಂತೆ ಮಾತಾಡುತ್ತಿದ್ದಾರೆ ಮಾತಾಡಲಿ. ಹತಾಶೆಯ ಮನೋಭಾವದಲ್ಲಿ ಇರೋದನ್ನು ಜನರೇ ತೀರ್ಮಾನ ಮಾಡ್ತಾರೆ ಎಂದರು.
ನಾನು ತಪ್ಪು ಮಾಡಿಲ್ಲ ಎಂದು ಸಿದ್ದರಾಮಯ್ಯ ಹೇಳಿಕೆ ವಿಚಾರ ಸಂಬಂಧ ಮಾತನಾಡಿದ ಬಿಎಸ್ವೈ, ಸಿಎಂ ತಮ್ಮ ಪತ್ನಿಗೆ ಬೆಲೆ ಬಾಳುವ ಸೈಟ್ ಗಳನ್ನು ಕೊಟ್ಟಿದ್ದಾರೆ. ಮನೆಯವರಿಗೆ ಬೆಲೆ ಬಾಳುವ ಸೈಟ್ ಕೊಟ್ಟ ಉದಾಹರಣೆ ಇದ್ಯಾ? ಇದು ಅಕ್ಷಮ್ಯ ಅಪರಾಧ, ಅದಕ್ಕಾಗಿ ಹೋರಾಟ ಮಾಡ್ತಿದ್ದೇವೆ ಎಂದರು.
Poll (Public Option)

Post a comment
Log in to write reviews