
ಬೆಂಗಳೂರು: ಕಿತ್ತೂರು ಉತ್ಸವದ ಜ್ಯೋತಿ ಬೆಳಗುವ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬೆಂಕಿಯ ಕಿಡಿ ತಾಗಿರುವ ಘಟನೆ ವಿಧಾನಸೌಧದಲ್ಲಿ ನಡೆದಿದೆ. ವಿಧಾನಸೌಧದ ಮುಂಭಾಗ ನಡೆದ 200ನೇ ಕಿತ್ತೂರು ವಿಜಯೋತ್ಸವ ಆಚರಣೆ ಕಾರ್ಯಕ್ರಮಕ್ಕೆ ಇಂದು ಸಿಎಂ ಚಾಲನೆ ನೀಡಿದರು. ಕಿತ್ತೂರು ಉತ್ಸವ ಜ್ಯೋತಿಗೆ ಚಾಲನೆ ನೀಡಿದ ಬಳಿಕ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಜಾಗ ಬಿಡಲು ಸಿಎಂ ಮುಂದಾದರು. ಈ ವೇಳೆ ಸಿಎಂ ದೀಪದ ಹತ್ತಿರ ಬಂದಾಗ ಎಡಕೈಗೆ ಬೆಂಕಿಯ ಕಿಡಿತಾಗಿದೆ. ಇದನ್ನು ಕಂಡ ಗನ್ ಮ್ಯಾನ್ ಕೂಡಲೆ ಬೆಂಕಿ ನಂದಿಸಿದ್ದಾರೆ. ಸ್ವಲ್ಪದರಲ್ಲೇ ಭಾರೀ ಅನಾಹುತ ತಪ್ಪಿದೆ. ಘಟನೆ ನಡೆದಿದೆ.
ಈ ಸಂದರ್ಭದಲ್ಲಿ ಡಿಸಿಎಂ ಡಿಕೆಶಿವಕುಮಾರ್, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಎಚ್.ಕೆ. ಪಾಟೀಲ್, ಕೃಷ್ಣ ಬೈರೇಗೌಡ, ಪ್ರಿಯಾಂಕ್ ಖರ್ಗೆ ಸೇರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Poll (Public Option)

Post a comment
Log in to write reviews