
ಮಂಜುಮ್ಮೆಲ್ ಬಾಯ್ಸ್ ಸಿನಿಮಾದ ಪಾತ್ರದಾರಿ ಶ್ರೀನಾಥ್ ಭಾಸಿ ವೈರಸ್, ಹೋಮ್, ಕುಂಬಳಂಗಿ ನೈಟ್ಸ್ ಅಂತಹ ಅದ್ಭುತ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡ ಮಾಲಿವುಡ್ ಸ್ಟಾರ್ ನಟ ನಮ್ಮ ಕನ್ನಡದ ಪ್ರೊಡ್ಯೂಸರ್ & ಡೈರೆಕ್ಟರ್ ಶಶಿಧರ ಕೆ ಎಮ್ ನಿರ್ದೇಶನ ಮಾಡ್ತಿರೋ ಚೊಚ್ಚಲ ಮಲಯಾಳಂ ಸಿನಿಮಾ ಸಿಬಿಲ್ ಸ್ಕೋರ್ ನಲ್ಲಿ ನಾಯಕ ನಟನಾಗಿ ಕಾಣಿಸಿಕೊಳ್ಳಲಿದ್ದಾರೆ.
ಸಿನಿಮಾವನ್ನು ಕನ್ನಡದ ನಿರ್ದೇಶಕ ನಿರ್ದೇಶನ ಮಾಡುತ್ತಿರುವ ಕಾರಣ, ಹಾಗೆ ಮಲಯಾಳಂ ಸಿನಿಮಾ ಆಗಿರುವುದರಿಂದ ಈ ಸಿನಿಮಾದಲ್ಲಿ ಕನ್ನಡ ಹಾಗೂ ಮಲಯಾಳಂ ಭಾಷೆಯ ತಾಂತ್ರಿಕ ವರ್ಗದವರು ಇರುತ್ತಾರೆ. ಸೋಹನ್ ಸೀನುಲಾಲ್, ದೀಪಕ್ ಪ್ರಿನ್ಸ್ ಸಿನಿಮಾದಲ್ಲಿ ಮುಖ್ಯ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಎಮೋಷನ್ಸ್ ಫ್ಯಾಕ್ಟರಿ ಗ್ರೂಪ್ ಪ್ರೊಡಕ್ಷನ್ ಹೌಸ್ ಬ್ಯಾನರ್ ಅಡಿಯಲ್ಲಿ ಮೂಡಿ ಬರುತ್ತಿರುವ ಸಿನಿಮಾಗೆ ವಿವೇಕ್ ಶ್ರೀಕಂಠಯ್ಯ ಬಂಡವಾಳ ಹೂಡುತ್ತಿದ್ದಾರೆ. ಕೋ ಪ್ರೊಡ್ಯೂಸರ್ ಆಗಿ ವಿಕ್ರಮ್, ಲೈನ್ ಪ್ರೊಡ್ಯೂಸರ್ ಆಗಿ ದೀಪು ಕರುಣಾಕರಣ್ ಎಕ್ಸಿಕ್ಯೂಟೀವ್ ಪ್ರೊಡ್ಯೂಸರ್ ಆಗಿ ಶಾಜಿ ಫ್ರಾನ್ಸಿಸ್ ಕೈ ಜೋಡಿಸಿದ್ದಾರೆ.,ಇನ್ನೂ ಕ್ರಿಯೇಟಿವ್ ಹೆಡ್ ಆಗಿ ಶರತ್ ವಿನಾಯಕ್ ಸಿನಿಮಾಗೆ ಜೊತೆಯಾಗಿದ್ದಾರೆ.
Poll (Public Option)

Post a comment
Log in to write reviews