
ಬೆಂಗಳೂರು: ಸೋಮವಾರ ರಾತ್ರಿ ಸುರಿಯುತ್ತಿರುವ ಭಾರಿ ಮಳೆ ನಾನಾ ಅವಾಂತರಕ್ಕೆ ಕಾರಣವಾಗುತ್ತಿದ್ದು, ಇದೀಗ ಇದೇ ಮಳೆಯ ಕಾರಣದಿಂದಾಗಿ BMTC ಎಲೆಕ್ಟ್ರಿಕ್ ಬಸ್ ವೊಂದು ಬೆಂಕಿಗಾಹುತಿಯಾಗಿದೆ. ಅಚ್ಚರಿಯಾದರೂ ಸತ್ಯ.. ನಾಗವಾರ - ಹೆಬ್ಬಾಳ ಸರ್ವಿಸ್ ರಸ್ತೆಯಲ್ಲಿ ನಿನ್ನೆ ಬಿಎಂಟಿಸಿ (BMTC) ಎಲೆಕ್ಟ್ರಿಕ್ ಬಸ್ (Electric Bus) ನಡುರಸ್ತೆಯಲ್ಲೇ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹೊತ್ತಿ ಉರಿದಿದೆ.
ಬೆಂಕಿ ಹೊತ್ತಿಕೊಂಡ ತಕ್ಷಣ ಚಾಲಕ ಮತ್ತು ನಿರ್ವಾಹಕ ಪ್ರಯಾಣಿಕರನ್ನ ಇಳಿಸಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಅಗ್ನಿಶಾಮಕ ವಾಹನ ಸ್ಥಳಕ್ಕೆ ತಲುಪುವ ವೇಳೆಗೆ ಬಸ್ ಬೆಂಕಿಗಾಹುತಿಯಾಗಿದೆ. ನಂತರ ಬಂದ ಅಗ್ನಿಶಾಮಕದಳ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಬಸ್ ಏಕಾಏಕಿ 2 ಅಡಿ ಉದ್ಧದ ನೀರಿನಲ್ಲಿ ಬಸ್ ಚಲಾಸಿದ್ದರಿಂದ ಅದರ ಎಲೆಕ್ಟ್ರಾನಿಕ್ ಯಂತ್ರಗಳಿಗೆ ನೀರು ನುಗ್ಗಿದ್ದು ಶಾರ್ಟ್ ಸರ್ಕ್ಯೂಟ್ ಸಂಭವಿಸಿರುವ ಸಾಧ್ಯತೆ ಇದೆ ಎನ್ನಲಾಗಿದೆ.
Poll (Public Option)

Post a comment
Log in to write reviews