ಬೆಂಗಳೂರು :ಮೈಸೂರು ನಗರಾಭಿವೃದ್ಧಿದಲ್ಲಿ ನಡೆದಿದೆ ಎನ್ನಲಾಗಿರುವ ಹಗರಣದ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೋಮೆ ಶಾಕ್ ಎದುರಾಗಿದೆ. ಮೈಸೂರು ನಗರ ಅಭಿವೃದ್ಧಿ ಪ್ರಾಧಿಕಾರದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಸುಮಾರು 56 ಕೋಟಿ ರು. ಮೌಲ್ಯದ 14 ಬದಲಿ ನಿವೇಶನಗಳನ್ನು ಪಡೆದಿರುವ ಪ್ರಕರಣಕ್ಕೆ ಸಬಂಧಿಸಿದಂತೆ ಸಿದ್ದರಾಮಯ್ಯ ವಿರುದ್ಧದ ತನಿಖೆಗೆ ರಾಜ್ಯಪಾಲರು ನೀಡಿದ್ದ ಅನುಮೋದನೆಯನ್ನು ಹೈ ಕೋರ್ಟ್ ಎತ್ತಿಹಿಡಿಯಿತು. ಹೀಗಾಗಿ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ವಿಚಾರಣೆಗೆಯಿದ್ದ ತಡೆ ವಜಾಗೊಂಡಿತು. ಇಂದು ವಿಚಾರಣೆ ನಡೆಸಿದ ಕೋರ್ಟ್ ಸಿಎಂ ಸಿದ್ದರಾಮಯ್ಯ ವಿರುದ್ಧ ಮೈಸೂರು ಲೋಕಯುಕ್ತಾ ಪೊಲೀಸರು 3 ತಿಂಗಳಲ್ಲಿ ತನಿಖೆ ನಡೆಸಿ ವರದಿ ನೀಡುವಂತೆ ಆದೇಶ ಹೊರಡಿಸಿದೆ.
ಇದೀಗ ಇದೇ ಕೇಸ್ ಗೆ ಸಂಬಂಧಿಸಿದಂತೆ ಆರ್.ಟಿ.ಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು ನೀಡಿರುವ ಖಾಸಗಿ ದೂರು ವಿಚಾರಣೆ ಜನಪ್ರತಿನಿಧಿಗಳ ಕೋರ್ಟ್ ನಲ್ಲಿ ನಡೆದಿದ್ದು, ಈ ಇಡೀ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಪಾತ್ರವೇನು? ಹೀಗಾಗಿ ಈ ಕೇಸ್ ವಿರುದ್ಧ ಸಂಪೂರ್ಣ ತನಿಖೆ ಅಗತ್ಯವಿದೆ ಎಂದು ನ್ಯಾಯಾಲಯ ಆದೇಶಿಸಿದೆ. ಪಿಸಿ ಆಕ್ಟ್ 7ಸಿ ಅಡಿ ತನಿಖೆ ಅಗತ್ಯತೆ ಪ್ರಸ್ತುತ ಪ್ರಕರಣದಲ್ಲಿ ಕಾಣುತ್ತಿದೆ. ತನಿಖೆಗೆ ಮುಖ್ಯ ಮಂತ್ರಿಗಳು ಹಿಂಜರಿಯಬಾರದು. ಬಿಎನ್ಎಸ್ ಎಸ್ ಅಡಿ ಪ್ರಕರಣ ದಾಖಲು ಮಾಡಬಹುದು ಎಂಬ ಬಗ್ಗೆ ಕೆಲ ಹೈಕೋರ್ಟ್ ಗಳ ಆದೇಶಗಳನ್ನ ಸ್ನೇಹಮಯಿ ಕೃಷ್ಣ ಅವರ ಪರ ವಕೀಲೆ ಲಕ್ಷ್ಮಿ ಅಯ್ಯಂಗಾರ್ ಜನಪ್ರತಿನಿಧಿಗಳ ಕೋರ್ಟ್ ಗೆ ಸಲ್ಲಿಸಿದರು. ಬಿಎನ್ಎಸ್ಎಸ್ 175(3) ಆದೇಶ ಮಾಡುವಂತೆ ವಕೀಲರು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಆದೇಶ ಮಾಡುವುದಾಗಿ ತಿಳಿಸಿದ ಜಡ್ಜ್ ಸಂತೋಷ್ ಗಜಾನನ ಭಟ್ ಸೆ.24ರಂದು ಹೈಕೋರ್ಟ್ ನೀಡಿದ್ದ ಆದೇಶ ಪರಿಗಣಿಸಿ ಖಾಸಗಿ ದೂರಿನ ಹಿನ್ನೆಲೆ ಆದೇಶ ನೀಡಿದ್ದಾರೆ.
Post a comment
Log in to write reviews