
ಬೆಂಗಳೂರು: ಕುಮಾರ್ ಬಂಗಾರಪ್ಪರವರು ಗೀತಾಶಿವರಾಜ್ ಕುಮಾರ್ ಹಾಗೂ ಶಿವರಾಜ್ ಕುಮಾರ್ ಅವರನ್ನು ಟೀಕಿಸಿ ಸಾಮಾಜಿಕ ಜಾಲತಾಣದಲ್ಲಿ ಈ ಹಿಂದೆ ಪೋಸ್ಟ್ ಹಾಕಿದ್ದರು. ಅದನ್ನು ವಿರೋಧಿಸಿ ಶಿವರಾಜ್ ಕುಮಾರ್ ಅಭಿಮಾನಿಗಳು ಇಂದು ಕುಮಾರ್ ಬಂಗಾರಪ್ಪನವರ ಮನೆಗೆ ಮುತ್ತಿಗೆ ಹಾಕಿದ್ದಾರೆ. ಮನೆಗೆ ನುಗ್ಗಿದ ಸಂಘಟನೆಯವರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ
ಚುನಾವಣೆ ಸೋತ ತಂಗಿ ಮತ್ತು ಭಾವ ಚಿಂತಿಸುವ ಅಗತ್ಯವಿಲ್ಲ. ಅಕ್ಕ ಸಿನಿಮಾದಲ್ಲಿ ಡಾನ್ ಆಗಿದ್ದಾರೆ. ನಟ ಶಿವರಾಜ್ ಕುಮಾರ್ ಕೆಲಸವಿಲ್ಲವೆಂದು ಚಿಂತಿಸೋದು ಬೇಡ. ನಮ್ಮೂರ ಜಾತ್ರೆಯಲ್ಲಿ ಡ್ಯಾನ್ಸ್ ಮಾಡುವ ಕೆಲಸ ಖಾಲಿ ಇದೆ ಎಂದು ಟೀಕೆ ಮಾಡುವ ಪೋಸ್ಟ್ ಒಂದನ್ನ ಸಾಮಾಜಿಕ ಜಾಲತಾಣಗಳಾದ ಎಕ್ಸ್ ಖಾತೆ ಮತ್ತು ಫೇಸ್ ಬುಕ್ ನಲ್ಲಿ ಹಾಕಿದ್ದರು.
ಈ ಪೋಸ್ಟ್ ಶಿವಾರಾಜ್ ಕುಮಾರ ಅಭಿಮಾನಿಗಳನ್ನ ಕೆರಳಿಸಿದೆ ಹಾಗಾಗಿ ಬೆಂಗಳೂರಿನ ಸದಾಶಿವ ನಗರದಲ್ಲಿರುವ ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ಕುಮಾರ್ ಬಂಗಾರಪ್ಪನವರ ಮನೆಯ ಮುಂದೆ ಶಿವರಾಜ್ ಕುಮಾರ್ ಅಭಿಮಾನಿಗಳು ಪ್ರತಿಭಟನೆ ನಡೆಸಿದ್ದಾರೆ.
Poll (Public Option)

Post a comment
Log in to write reviews