
ನಿರ್ದೇಶಕ ಆನಂದ್ ಕೃಷ್ಣನ್ ಆಕ್ಷನ್ ಕಟ್ ಹೇಳಿರುವ 'ನಾನ್ ವೈಲೆನ್ಸ್' ಚಿತ್ರದ ಫಸ್ಟ್ ಲುಕ್ ಅನ್ನು ನಟ ಶಿವರಾಜ್ ಕುಮಾರ್ ಬಿಡುಗಡೆ ಮಾಡಿದ್ದಾರೆ.
ಈ ಚಿತ್ರದ ಪೋಸ್ಟರ್ ಅನ್ನು ಬಿಡುಗಡೆ ಮಾಡಲು ಖುಷಿಯಾಗುತ್ತಿದೆ. ಇಡೀ ತಂಡಕ್ಕೆ ಯಶಸ್ಸು ಸಿಗಲಿ ಎಂದು ಅವರ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.
ಈ ಚಿತ್ರದಲ್ಲಿ ಮೆಟ್ರೋ ಶಿರೀಶ್, ಬಾಬಿ ಸಿಂಹ ಮತ್ತು ಯೋಗಿ ಬಾಬು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದು ಕನ್ನಡದ ಗರುಡ ರಾಮ್, ಅದಿತಿ ಬಾಲನ್, ಆದಿತ್ಯ ಕಥಿರ್ ತಾರಾಬಳಗದಲ್ಲಿದ್ದಾರೆ. 90ರ ದಶಕದಲ್ಲಿ ಮಧುರೈ ಜೈಲಿನೊಳಗೆ ನಡೆಯುವ ಘಟನೆಯ ಕಥೆ ಇದಾಗಿದೆ. ಇದರ ಚಿತ್ರೀಕರಣ ಮುಕ್ತಾಯ ಹಂತಕ್ಕೆ ಬಂದಿದ್ದು, ಶೀಘ್ರದಲ್ಲೇ ಟೀಸರ್ ಮತ್ತು ಟ್ರೇಲರ್ ರಿಲೀಸ್ ಮಾಡಲಾಗುವುದು ಎಂದು ಚಿತ್ರತಂಡ ಘೋಷಿಸಿದೆ. ಎಸ್ ಉದಯ್ ಕುಮಾರ್ ಛಾಯಾಗ್ರಹಣವಿದೆ.
Poll (Public Option)

Post a comment
Log in to write reviews