
ಉತ್ತರ ಕನ್ನಡ: ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಹೆದ್ದಾರಿ ಮೇಲೆ ಗುಡ್ಡ ಕುಸಿತದಿಂದ ನಾಪತ್ತೆಯಾದವರಿಗಾಗಿ ಇಂದಿಗೂ ಶೋಧಕಾರ್ಯ ಮುಂದುವರೆದಿದೆ. ಬುಧವಾರ (ಜುಲೈ 24) ಗಂಗಾವಳಿ ನದಿಯಲ್ಲಿ ಕಾರ್ಯಾಚರಣೆಗೆಂದು ಸುಮಾರು 60 ಅಡಿ ಉದ್ದ ಹಾಗೂ 30 ಅಡಿ ಆಳದ ಮಣ್ಣು ತೆರವು ಮಾಡುವ ಅತ್ಯಾಧುನಿಕ ಬೂಮ್ ಯಂತ್ರವನ್ನು ಕೂಡ ತರಿಸಲಾಗಿದೆ.
ಕಳೆದ 9 ದಿನಗಳಿಂದ ಗುಡ್ಡ ಕುಸಿತ ಪ್ರದೇಶದಲ್ಲಿ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ. ಈವರೆಗೆ 8 ಮಂದಿಯ ಮೃತದೇಹಗಳು ಪತ್ತೆಯಾಗಿವೆ. ಇನ್ನೂ ಮೂವರ ಮೃತದೇಹ ಪತ್ತೆಯಾಗಬೇಕಿರುವ ಹಿನ್ನೆಲೆಯಲ್ಲಿ ಸೇನಾಪಡೆಗಳು, ನೌಕಾನೆಲೆ ಮುಳುಗು ತಜ್ಞರು, ಎನ್ಡಿಆರ್ಎಫ್, ಎಸ್ಡಿಆರ್ಎಫ್ ತಂಡಗಳಿಂದ ನಿರಂತರ ಶೋಧ ಕಾರ್ಯ ಪ್ರಗತಿಯಲ್ಲಿದೆ.
Poll (Public Option)

Post a comment
Log in to write reviews