ನಟ ಶರಣ್ ಅವರು ಮರ್ಯಾದೆ ಪ್ರಶ್ನೆ ಎಂಬ ಸಿನಿಮಾದ ಮೊದಲ ಹಾಡನ್ನು ಹಾಡಿದ್ದಾರೆ. ಪ್ರಮೋದ್ ಮರವಂತೆ ಅವರು ಬರೆದಿದು ಸಂಗೀತ ನಿರ್ದೇಶಕ ಅರ್ಜುನ್ ರಾಮು ಈ ಹಾಡನ್ನು ಜಾನಪದ ಶೈಲಿಯಲ್ಲಿ ಕಂಪೋಸ್ ಮಾಡಿದ್ದಾರೆ. ಈ ಹಾಡು ತುಂಬಾ ಸೊಗಸಾದ ಸಾಹಿತ್ಯವನ್ನು ಒಳಗೊಂಡಿದೆ. ಈ ಹಾಡಿನ ಸಾಹಿತ್ಯದಲ್ಲಿ ಬರುವ ಪ್ರತಿ ಸಾಲುಗಳು ಧನಾತ್ಮಕ ಚಿಂತನೆಗೆ ಕರೆದೊಯ್ಯುತ್ತದೆ. ದಿನ ಬೆಳಗಾದರೆ ಕೇಳುವ ಹಾಡಾಗಿರಬೇಕು ಎಂಬುದು ಈ ಹಾಡಿನ ಮುಖ್ಯ ಉದ್ದೇಶವಾಗಿ ಕಾಣುತ್ತಿದೆ.
ಚಿತ್ರದ ನಿರ್ದೇಶಕ ನಾಗರಾಜ ಸೋಮಯಾಜಿ ಈ ಹಾಡಿನಲ್ಲಿ ಅವರು ಬದುಕುತ್ತಿರುವ ಮಧ್ಯಮ ವರ್ಗದ ಸಮಾಜವನ್ನು ಪರಿಚಯಿಸುವ ಸಲುವಾಗಿ ಸಾಂದರ್ಭಿಕವಾಗಿ ಈ ಹಾಡನ್ನು ಬಳಸಲಾಗಿದೆ ಜೊತೆಗೆ ನಟರ ಪಾತ್ರದ ಪರಿಚಯ ಮಾಡಿದೆ ಎಂದು ತಿಳಿಸಿದ್ದಾರೆ.
ನವೆಂಬರ್ ನಲ್ಲಿ ತೆರೆ ಕಾಣಲಿರೋ ಮರ್ಯಾದೆ ಪ್ರಶ್ನೆ ಸಿನಿಮಾವು ಮಧ್ಯಮ ವರ್ಗದ ಬಗ್ಗೆ ಇದೆ. ಈಗಾಗಲೇ ಬಿಡುಗಡೆ ಮಾಡಿರುವ ಕ್ಯಾರೆಕ್ಟರ್ ಪೋಸ್ಟರ್ ನಲ್ಲಿ ರಾಕೇಶ್ ಅಡಿಗ ಅವರು ಒಬ್ಬ ಕಾರ್ಯಕರ್ತನಾಗಿ ಸುನಿಲ್ ರಾವ್ ಅವರು ಒಬ್ಬ ಡೆಲಿವರಿಬಾಯಾಗಿ,ಪೂರ್ಣಚಂದ್ರ ಮೈಸೂರು ಕ್ಯಾಬ್ ಡ್ರೈವರ್ ಆಗಿ, ತೇಜು ಬೆಳ್ವಾಡಿ ಅವರು ಸೇಲ್ಸ್ ಗರ್ಲ್ ಆಗಿ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿದ್ದಾರೆ.
Post a comment
Log in to write reviews