
ಮುದ್ದೇಬಿಹಾಳ: ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ತಾಲೂಕಿನ ಕೆಸರಟ್ಟಿಯ ಶಂಕರಲಿಂಗೇಶ್ವರ ಜಾತ್ರೆ ಹಾಗೂ ಧರ್ಮ ಸಭೆ ಜೂ. 6 ರಂದು ನಡೆಯಲಿದೆ.
ಜಾತ್ರೆಯಲ್ಲಿ ಪವಾಡ ಪುರುಷ ಶ್ರೀ ಶಂಕರಲಿಂಗೇಶ್ವರ ಭಕ್ತಿಗೀತೆಯ ಆಡಿಯೋ ಬಿಡುಗಡೆ ಹಾಗೂ ಶಂಕರಲಿಂಗ ಮಹಾಸ್ವಾಮಿಗಳ ತೈಲವರ್ಣ ಕಲಾಕೃತಿ ಭಾವಚಿತ್ರ ಲೋಕಾರ್ಪಣೆ ಇರಲಿದೆ.
ಇದಲ್ಲದೆ ಬಾಲ ತಪಸ್ವಿ ಪರಮಪೂಜ್ಯ ಸೋಮಲಿಂಗ ಮಹಾಸ್ವಾಮಿಗಳ 18 ನೇ ತುಲಾಭಾರ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭವಿರಲಿದೆ. ಸೋಮಲಿಂಗ ಮಹಾಸ್ವಾಮಿ ದಿವ್ಯ ಸಾನಿಧ್ಯ ವಹಿಸಲಿದ್ದು, ಯರನಾಳ ಗುರು ಸಂಗನಬಸವ ಮಹಾಸ್ವಾಮಿ ಉಪಸ್ಥಿತರಿರಲಿದ್ದಾರೆ. ಶಾಸಕ ರಾಜುಗೌಡ ಪಾಟೀಲ ಕಾರ್ಯಕ್ರಮ ಉದ್ಘಾಟಿಸಲಿದ್ದು, ಬಾಗಲಕೋಟೆ ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಅಮರೇಶ ನಾಯಕ, ಡಾ. ಪ್ರಭುಗೌಡ ಲಿಂಗದಳ್ಳಿ (ಚಬನೂರ), ಕೈಲಾಸ ಪಡತರೆ, ಹುಸೇನ ಸೋಲಾಪೂರ ಗ್ರಾಪಂ ಅಧ್ಯಕ್ಷ ಕೊಂಡಗೂಳಿ ಭಾಗವಹಿಸಲಿದ್ದಾರೆ. ಪಿಯುಸಿ ಹಾಗೂ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಎಂದು ಬಾಲ ತಪಸ್ವಿ ಸೋಮಲಿಂಗ ಸ್ವಾಮೀಜಿ ತಿಳಿಸಿದ್ದಾರೆ.
Poll (Public Option)

Post a comment
Log in to write reviews