ಟಾಪ್ 10 ನ್ಯೂಸ್
ಪತ್ರಿಕೆ ವಿತರಣೆ ಮಾಡಿ ಎಸ್‌ಎಸ್ ಎಲ್ ಸಿ ಯಲ್ಲಿ ಕರ್ನಾಟಕಕ್ಕೆ 7ನೇ ಸ್ಥಾನ ಪಡೆದ ಶಂಕರ್

ನಗರದ ನೆಲಗದರನಹಳ್ಳಿಯ ಗಂಗಾ ಇಂಟರ್‌ನ್ಯಾಷನಲ್ ಸ್ಕೂಲ್ ಶಾಲೆಯ ವಿದ್ಯಾರ್ಥಿ ಶಂಕರ್ ರಣಧೀರ್ ಎಂ. ಮುಂಜಾನೆ ಪತ್ರಿಕೆ ವಿತರಣೆ ಮಾಡುತ್ತಲೇ ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಸಾಧನೆ ಮಾಡಿದ್ದಾನೆ. 2023-2024 ಸಾಲಿನ ಪರೀಕ್ಷೆಯಲ್ಲಿ ರಾಜ್ಯಕ್ಕೆ 7ನೇ ಸ್ಥಾನ ಪಡೆದಿದ್ದಾನೆ.
ಶಂಕರ್ ರಣಧೀರ್ ಮುಂಜಾನೆ ದಿನಪತ್ರಿಕೆ ವಿತರಿಸುವ ಕೆಲಸ ಮಾಡುತ್ತಿದ್ದ. ಇದರ ನಡುವೆಯೇ ವಿದ್ಯಾಭ್ಯಾಸ ಮಾಡಿ ರಾಜ್ಯದಲ್ಲಿ 7ನೇ ಸ್ಥಾನ ಪಡೆದಿದ್ದಾನೆ. 625ಕ್ಕೆ 617 ಅಂಕ ಗಳಿಸಿ ಶೇಕಡ 98.72 ಫಲಿತಾಂಶ ಪಡೆದಿದ್ದಾನೆ.
Tags:
Poll (Public Option)

Post a comment
Log in to write reviews