
ಚಿಕ್ಕೋಡಿ: ಬಸ್ ಕೊರತೆಯಿಂದಾಗಿ ಪರೀಕ್ಷಾರ್ಥಿಗಳು ಶಿಕ್ಷಕರ ಅರ್ಹತಾ ಪರೀಕ್ಷೆಗೆ ತೆರಳಲಾಗದೆ ಸಂಕಷ್ಟ ಅನುಭವಿಸಿದ ಪರಿಸ್ಥಿತಿ ಚಿಕ್ಕೋಡಿಯಲ್ಲಿ ಎದುರಾಗಿದೆ.
ನಿನ್ನೆ ರಾಜ್ಯಾದಾದ್ಯಂತ TET ಪರೀಕ್ಷೆ ನಡೆಸಲಾಗಿತ್ತು. ಶಕ್ತಿಯೋಜನೆ ಪರಿಣಾಮವಾಗಿ ಎಲ್ಲ ಬಸ್‌ಗಳು ಪ್ರಯಾಣಿಕರಿಂದ ತುಂಬಿ ತುಳುಕಿದ್ದು ಪರೀಕ್ಷಾರ್ಥಿಗಳು ಬಸ್ ಹತ್ತಲು ಸಾಧ್ಯವಾಗದೆ ಸಮಸ್ಯೆಗೆ ಸಿಲುಕಿದ್ದರೆ, ಕೆಲ ಪರೀಕ್ಷಾರ್ಥಿಗಳು ಒಂದು ದಿನ ಮುಂಚಿತವಾಗಿ ಪರೀಕ್ಷಾ ಕೇಂದ್ರಕ್ಕೆ ಹಾಜರಿದ್ದರು.
ಅಷ್ಟೇ ಅಲ್ಲದೆ ವಿವಿಧ ತಾಲ್ಲೂಕೂ ಗ್ರಾಮಗಳಿಂದ ಪರೀಕ್ಷೆ ಬರೆಯಲು ಆಗಮಿಸಿದ ಪರೀಕ್ಷಾರ್ಥಿಗಳು ಬಸ್‌ಗಳ ಕೊರತೆಯಿಂದಾಗಿ ವಾಪಸ್ ತೆರಳಲು ಪರದಾಡುವಂತಾಯಿತು.
Poll (Public Option)

Post a comment
Log in to write reviews