
ಮುಂಬೈ: ಶಾರುಖ್ ಖಾನ್ ಅವರು 2023ರಲ್ಲಿ ಹ್ಯಾಟ್ರಿಕ್ ಹಿಟ್ ಕೊಟ್ಟರು.ಸದ್ಯ ಅವರು ‘ಕಿಂಗ್’ ಹೆಸರಿನ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಮಧ್ಯೆ ಅವರ ಕಣ್ಣಿಗೆ ಹಾನಿ ಆಗಿದೆ ಎಂದು ವರದಿ ಆಗಿದೆ. ಈ ಕಾರಣಕ್ಕೆ ಅವರು ಅಮೆರಿಕದಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ.
ಶಾರುಖ್ ಖಾನ್ ಅವರು ಮೇ 21ರಂದು ಅನಾರೋಗ್ಯ ಸಮಸ್ಯೆಯಿಂದ ಬಳಲಿದ್ದರು. ಐಪಿಎಲ್ ವೀಕ್ಷಣೆ ಮಾಡುತ್ತಿದ್ದ ಅವರಿಗೆ ಹೀಟ್ ಸ್ಟ್ರೋಕ್ ಆಗಿತ್ತು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ನಂತರ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದರು. ಕೆಕೆಆರ್ ತಂಡ ಕಪ್ ಎತ್ತುವುದನ್ನು ಕೂಡ ಅವರು ವೀಕ್ಷಿಸಿದರು. ಈಗ ಅವರು ಮತ್ತೊಮ್ಮೆ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಅದೂ ದೂರದ ಅಮೆರಿಕದಲ್ಲಿ. ಅಷ್ಟಕ್ಕೂ ಅವರಿಗೆ ಆಗಿದ್ದೇನು ಎನ್ನುವ ಬಗ್ಗೆ ಇಲ್ಲಿದೆ ವಿವರ.
ಶಾರುಖ್ ಖಾನ್ ಅವರಿಗೆ ಕಣ್ಣಿನ ಸಮಸ್ಯೆ ಉಂಟಾಗಿದೆ. ಈ ಕಾರಣಕ್ಕೆ ಅವರು ಮಂಗಳವಾರ (ಜುಲೈ 30) ಅವರು ಅಮೆರಿಕಕ್ಕೆ ತೆರಳಿದ್ದರು. ಅಲ್ಲಿ ಅವರು ಚಿಕಿತ್ಸೆ ಪಡೆದಿದ್ದಾರೆ. ಆದರೆ, ಯೋಜನೆ ಪ್ರಕಾರ ಟ್ರೀಟ್ಮೆಂಟ್ ನಡೆದಿಲ್ಲ. ಹೀಗಾಗಿ, ಶಾರುಖ್ ಅವರು ಅಮೆರಿಕಕ್ಕೆ ಹಾರುತ್ತಿದ್ದಾರೆ. ಅಲ್ಲಿರೋ ಕಣ್ಣಿನ ಸ್ಪೆಷಲಿಸ್ಟ್ಗಳ ಬಳಿ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ ಎನ್ನಲಾಗಿದೆ. ಮುಂಬೈನಲ್ಲಿ ನಿಜಕ್ಕೂ ಶಾರುಖ್ಗೆ ಆಗಿದ್ದೇನು ಎನ್ನುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಅವರ ಕಣ್ಣಿಗೆ ಹಾನಿ ಆಗಿದೆ ಎನ್ನುವ ಶಂಕೆ ವ್ಯಕ್ತವಾಗಿದೆ.
Poll (Public Option)

Post a comment
Log in to write reviews