
ಬೆಂಗಳೂರು: ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧಿತರಾಗಿರುವ ಸೂರಜ್ ರೇವಣ್ಣ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು, ಮತ್ತೊಬ್ಬ ಸಂತ್ರಸ್ತ ತನ್ನ ಮೇಲೂ ದೌರ್ಜನ್ಯ ನಡೆದಿದೆ ಎಂದು ದೂರು ನೀಡಲು ಮುಂದಾಗಿದ್ದಾರೆ.
ಪ್ರಕರಣದ ಮಾಹಿತಿ ಹಂಚಿಕೊಂಡಿರುವ ಸಂತ್ರಸ್ತ, ಸೂರಜ್ ರವರು ಮೊದಲನೆ ಸಂತ್ರಸ್ತನಿಗೆ ಹಣ ನೀಡಲು ಮುಂದಾಗಿದ್ದರು. ನನ್ನ ಮೂಲಕ ಹಣವನ್ನು ನೀಡುವುದಕ್ಕೆ ಹೇಳಿದ್ದರು. ನಾನು ಮೊದಲ ಸಂತ್ರಸ್ತನ ಜೊತೆ ಮಾತಾಡಿದೆ. ಆದರೆ ಅವರು ಒಪ್ಪದೇ ದೂರು ನೀಡಿದ್ದಾರೆ. ನನ್ನ ಮೇಲೆ ಕೂಡಾ ಸೂರಜ್ ಅಹಸಜ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ಕೋವಿಡ್ ವೇಳೆ ನನ್ನ ಮೇಲೆ ದೌರ್ಜನ್ಯ ಎಸಗಿದ್ದಾರೆ. ಸುಮಾರು 8 ವರ್ಷಗಳಿಂದ ಸೂರಜ್ ನನಗೆ ಗೊತ್ತು. ಕೋವಿಡ್ ಸಮಯದಲ್ಲಿ ನನ್ನನ್ನ ಅವರ ತೋಟಕ್ಕೆ ಕರೆಸಿಕೊಂಡಿದ್ದರು. ಆಗ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ಇದಾದ ಬಳಿಕ ನಾನು ಬಹಳ ನೊಂದಿದ್ದೆ. ಸೂರಜ್ ವಿರುದ್ಧ ನಾನೂ ದೂರು ದಾಖಲಿಸುತ್ತೇನೆ. ಕಾನೂನಿನ ಮೇಲೆ ನನಗೆ ನಂಬಿಕೆ ಇದೆ ಎಂದು ಸಂತ್ರಸ್ತ ಹೇಳಿಕೊಂಡಿದ್ದಾರೆ.
Poll (Public Option)

Post a comment
Log in to write reviews