
ಬೆಂಗಳೂರು: ಓಲಾ, ಉಬರ್ ಆಟೋಗಳ ಪ್ರಯಾಣಕ್ಕೆ ಶೇ.5ರಷ್ಟು ಸೇವಾ ಶುಲ್ಕ ಹೆಚ್ಚಿಸಿ ಎಂದು ಸರ್ಕಾರ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ.
ಓಲಾ, ಉಬರ್ ಆಟೋ ಪ್ರಯಾಣಕ್ಕೆ ಶೇ.5ರಷ್ಟು ಮಾತ್ರವೇ ಜಿಎಸ್‌ಟಿ ವಿಧಿಸಿ ಪ್ರಾದೇಶಿಕ ಸಾರಿಗೆ ಇಲಾಖೆಗಳಿಗೆ ಸರ್ಕಾರ 2022ರ ನವೆಂಬರ್‌ನಲ್ಲಿ ಅಧಿಸೂಚನೆ ಹೊರಡಿಸಿತ್ತು. ಈ ಅಧಿಸೂಚನೆ ಪ್ರಶ್ನಿಸಿ ಓಲಾ ಮತ್ತು ಉಬರ್ ಕಂಪನಿಗಳು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದವು. ಅರ್ಜಿಯಲ್ಲಿ ತಕ್ಷಣದಿಂದ ಬರುವಂತೆ ಈ ಸೇವೆಯ ಸ್ಥಗಿತಗೊಳಿಸಬೇಕು ಮತ್ತು ರಾಜ್ಯ ಸರ್ಕಾರದ ಆದೇಶ ರದ್ದುಪಡಿಸಬೇಕು ಎಂದು ಎಎನ್‌ಐ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಮತ್ತು ಉಬರ್ ಇಂಡಿಯಾ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್ ಮನವಿ ಮಾಡಿದ್ದವು.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರ ಪೀಠ, ಸರ್ಕಾರದ ಆದೇಶ ಎತ್ತಿಹಿಡಿದು, ಅರ್ಜಿ ವಜಾಗೊಳಿಸಿದೆ. ಹೀಗಾಗಿ ಓಲಾ, ಉಬರ್ ಮನಸೋಇಚ್ಛೆ ಶುಲ್ಕ ವಿಧಿಸುತ್ತಿದ್ದ ಸಂಗ್ರಹಗಾರರಿಗೆ ಕಡಿವಾಣ ಬಿದ್ದಂತಾಗಿದೆ.
Poll (Public Option)

Post a comment
Log in to write reviews