ವಾಲ್ಮೀಕಿ ಅಭಿವೃದ್ದಿ ನಿಗಮದ ಹಣ ವರ್ಗಾವಣೆ ಪ್ರಕರಣ ಸಂಬಂಧ ಸಚಿವ ನಾಗೇಂದ್ರ ಬೆನ್ನಿಗೆ ನಿಂತಿರುವ ಸಚಿವ ಮಹದೇವಪ್ಪ, ಸತ್ಯಾಸತ್ಯತೆ ಹೊರಬರಲಿದೆ ಎಂದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಂದ್ರಶೇಖರ್ ಒಬ್ಬ ಒಳ್ಳೆಯ ಅಧಿಕಾರಿ, ಅವರ ಆತ್ಮಹತ್ಯೆಯಿಂದ ತುಂಬ ನೋವುಂಟಾಗಿದೆ. ಡೆತ್ ನೋಟ್ನಲ್ಲಿ ಕೆಲ ಆರೋಪಗಳನ್ನು ಮಾಡಿದ್ದಾರೆ. ಸರ್ಕಾರ ಕೂಡಲೇ ಎಚ್ಚೆತ್ತು ತನಿಖೆ ಶುರು ಮಾಡಿದೆ. ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಯುತ್ತದೆ. ಬಳಿಕ ಸತ್ಯಾಸತ್ಯತೆ ಹೊರಗಡೆ ಬರಲಿದೆ. ಇಲ್ಲಿ ದಲಿತರು ದಲಿತೇತರ ಹಣ ಅಂತಲ್ಲ, ಅದು ಸರ್ಕಾರದ ಹಣ. ಅಂತೆ ಕಂತೆಗಳ ಮೇಲೆ ಮಾತನಾಡಲು ಆಗುವುದಿಲ್ಲ ಎಂದರು.
ಪ್ರಕರಣ ಸಂಬಂಧ ಸಚಿವ ನಾಗೇಂದ್ರ ಅವರ ರಾಜಿನಾಮೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದೆ. ಪ್ರಕರಣ ರಾಜಕೀಯಕರಣಗೊಳಿಸಿದ ತಕ್ಷಣ ಮಾತನಾಡಲು ಆಗುವುದಿಲ್ಲ. ಈಶ್ವರಪ್ಪ ಪ್ರಕರಣವೇ ಬೇರೆ, ನಿಗಮದ ಹಣ ವರ್ಗಾವಣೆ ಪ್ರಕರಣವೇ ಬೇರೆ. ಅದಕ್ಕೂ ಇದಕ್ಕೂ ಹೋಲಿಕೆ ಸರಿಯಲ್ಲ. ವಿರೋಧ ಪಕ್ಷ ಆಗಿರುವುದರಿಂದ ರಾಜೀನಾಮೆ ಕೇಳುತ್ತಾರೆ. ಸಾಕ್ಷ್ಯಾಧಾರಗಳು ಹೊರಗಡೆ ಬರದೇ ಯಾವುದೇ ತೀರ್ಮಾನ ಮಾಡಲಾಗದು ಎಂದು ಸಚಿವರು ಹೇಳಿದ್ದಾರೆ.
Post a comment
Log in to write reviews