
ಶಿವಮೊಗ್ಗ: ಇಬ್ಬರು ಆಸಾಮಿಗಳು ಗಾಂಜಾವನ್ನು ಮಾರಾಟ ಮಾಡುತ್ತಿರುವ ಬಗ್ಗೆ ಪೊಲೀಸರು ಮಾಹಿತಿ ಸಂಗ್ರಹಿಸಿ ಇಬ್ಬರ ಮೇಲೆ ರೇಡ್ ಮಾಡಿರುವ ಘಟನೆ ಸೊರಬ ತಾಲ್ಲೂಕಿನ ಆನವಟ್ಟಿಯಲ್ಲಿ ನಡೆದಿದೆ.
ಶಿವಮೊಗ್ಗದ ಪೊಲೀಸರು ಗಾಂಜಾ ಬೇಟೆ ಮುಂದುವರಿಸಿದ್ದಾರೆ. ಇದಕ್ಕೆ ಪೂರಕವಾಗಿ ಸೊರಬ ತಾಲ್ಲೂಕು ಪೊಲೀಸರು 40 ಸಾವಿರ ರೂ. ಮೌಲ್ಯದ ಗಾಂಜಾ ಸೀಜ್ ಮಾಡಿದ್ದಾರೆ. ಆನವಟ್ಟಿ ಟೌನ್ ತಿಮ್ಲಾಪುರ ಗುಡ್ಡದ ರಸ್ತೆ ಕ್ರಾಸ್‌ನ ಬಳಿ ಇಬ್ಬರು ಗಾಂಜಾ ಮಾರಾಟ ಮಾಡುತ್ತಿರುವರ ಬಗ್ಗೆ ಮಾಹಿತಿ ತಿಳಿದು ಆನವಟ್ಟಿ ಪೊಲೀಸ್ ಠಾಣೆಯ ಸಿಬ್ಬಂಧಿಗಳ ತಂಡ ರೇಡ್ ಮಾಡಿದ್ದಾರೆ.
ಸ್ಥಳದಲ್ಲಿ ದಾಳಿ ನಡೆಸಿದ ಪೊಲೀಸರು ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳಾದ ಹಾವೇರಿ ಜಿಲ್ಲೆ ಗುಡ್ಡದ ಮಲ್ಲಾಪುರದ (27) ಸುಹೇಲ್ ಮೆಹಬೂಬ್ ಮತ್ತು ತಿಳುವಳ್ಳಿಯ (26) ಗೌಸ್ ಮೊಹಿದ್ದೀನ್ ಇವರನ್ನು ದಸ್ತಗಿರಿ ಮಾಡಿದೆ.
ಅಲ್ಲದೆ ಆರೋಪಿತರಿಂದ ಅಂದಾಜು ಮೌಲ್ಯ 40 ಸಾವಿರದ 980 ಗ್ರಾಂ ತೂಕದ ಒಣ ಗಾಂಜಾವನ್ನು, ಗಾಂಜಾ ಮಾರಾಟ ಮಾಡಿ ಗಳಿಸಿದ 600 ರೂ ನಗದು ಹಣವನ್ನು ಅಮಾನತು ಪಡಿಸಿಕೊಂಡು, ಆನವಟ್ಟಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Poll (Public Option)

Post a comment
Log in to write reviews