ಜಯಪುರ : ಜಿಲ್ಲೆಯಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಮತ್ತೊಬ್ಬರ ಆಸ್ತಿಗಳನ್ನು ಮಾರಾಟ ಮಾಡುವ ದಂಧೆ ಜೋರಾಗಿ ನಡೆದಿದೆ. ಕಳೆದ ಎರೆಡು ತಿಂಗಳಿನಿಂದ ಬೇರೆಯವರ ಆಸ್ತಿಗಳು ತಮ್ಮದೆಂದು ನಕಲಿ ದಾಖಲೆ ಸೃಷ್ಟಿ ಮಾಡಿ ಮತ್ತೊಬ್ಬರಿಗೆ ಮಾರಾಟ ಮಾಡಿರುವ 50 ಕ್ಕೂ ಆಧಿಕ ಪ್ರಕರಣಗಳು ಬೆಳಕಿಗೆ ಬಂದಿವೆ.
ಈ ಕುರಿತು ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದೆ. ಕೆಲ ಪ್ರಕರಣಗಳಲ್ಲಿ ಆರೋಪಿತರ ಬಂಧನವೂ ಆಗಿದೆ. ಇಂಥಹ ನಕಲಿಗಳ ಕಣ್ಣು ಇದೀಗ ಸರ್ಕಾರಿ ಆಸ್ತಿಗಳ ಮೇಲೂ ಬಿದ್ದಿದೆ. ಸರ್ಕಾರಿ ಜಮೀನಿನ ದಾಖಲೆಗಳನ್ನು ನಕಲಿ ಮಾಡಿ ಮತ್ತೊಬ್ಬರಿಗೆ ತಮ್ಮದೇ ಜಮೀನು ಎಂದು ಮಾರಾಟ ಮಾಡುತ್ತಿದ್ದಾರೆ.
ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ತೊರವಿ ಗ್ರಾಮದ ಹೊರ ಭಾಗದಲ್ಲಿನ 7.5 ಎಕರೆ ಜಮೀನಿನ ನಕಲಿ ದಾಖಲೆಗಳನ್ನು ಸೃಷ್ಟಿಸಿ ಮಾರಾಟ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ತೊರವಿ ಗ್ರಾಮದ ಹೊರ ಭಾಗದಲ್ಲಿರುವ ಸರ್ಕಾರಿ ಜಮೀನಿನು ಸರ್ವೇ ನಂಬರ್ 118/5 ಪೈಕಿ 7.5 ಎಕರೆ ಭೂಮಿ, 2001 ರಲ್ಲಿ ತೊರವಿ ಗ್ರಾಮದ ಜಕ್ಕಪ್ಪ ತೊರವಿ ಹಾಗೂ ಬೀರಪ್ಪ ತೊರವಿ ಎಂಬುವವರ ಹೆಸರಿಗೆ ಜಮೀನಿ ದಾಖಲೆಗಳು ನಮೂದಾಗಿದ್ದವು. ಇದನ್ನು ಕಂಡ ಜಕ್ಕಪ್ಪ ಹಾಗೂ ಬೀರಪ್ಪ ಈ ಜಮೀನು ನಮ್ಮದಲ್ಲ, ನಮ್ಮ ಹೆಸರಿಗೆ ಈ ಜಮೀನು ಹೇಗೆ ಬಂತು ಎಂಬುದು ನಮಗೆ ಗೊತ್ತಿಲ್ಲ. ನಮ್ಮ ಹೆಸರು ತೆಗೆಯಬೇಕೆಂದು ತಹಶೀಲ್ದಾರರಿಗೆ ಮನವಿ ಸಲ್ಲಿಸಿದ್ದರು. ಈಗ ಅದೇ ಜಮೀನಿನ ನಕಲಿ ದಾಖಲೆ ಸೃಷ್ಟಿ ಮಾಡಿ ಬೇರೆಯವರಿಗೆ ಮಾರಾಟ ಮಾಡಿರುವುದು ಹೊರ ಬಿದ್ದಿದೆ.
ಪೊಲೀಸರ ಖೆಡ್ಡಾಕ್ಕೆ ಬಿದ್ದ ಭೂಕಳ್ಳರು
ಈ ಪ್ರಕರಣದಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಜಮೀನಿನ ಮಾಲೀಕರು ನಾವೇ ಎಂದು ಖರೀಧಿದಾರರಿಗೆ ನಂಬಿಸಿ ಮಾರಾಟ ಮಾಡಿದ್ದವರು ಇದೀಗ ಪೊಲೀಸರ ಖೆಡ್ಡಾಕ್ಕೆ ಬಿದ್ದಿದ್ದಾರೆ. ಜಮೀನು ಖರೀದಿ ಮಾಡಿರುವ ಶರಣಪ್ಪ ಛಲವಾದಿ ಎಜೆಂಟ್ ಆಗಿ ಕೆಲಸ ಮಾಡಿ, ಲಕ್ಷ್ಮಣಗೌಡ ಬಿರಾದಾರ, ಮಲಕಾಜಿ ಪಾಂಡಿಚೇರಿ ಹಾಗೂ ಬಾಂಡ್ ರೈಟರ್ ಆಗಿರುವ ದತ್ತಾತ್ರೇಯ ಶಿವಶರಣ ಎಂಬ ನಾಲ್ವರನ್ನು ಆದರ್ಶ ನಗರ ಪೊಲೀಸರು ಅರೆಸ್ಟ್ ವಿಚಾರಣೆ ನಡೆಸುತ್ತಿದ್ದಾರೆ .
Post a comment
Log in to write reviews