
ಕುಪ್ವಾರ: ಕಳೆದ 3 ವರ್ಷಗಳಿಂದ ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನ ಸೇನೆಯ ರಕ್ಷಣಾ ಸಾಮರ್ಥ್ಯ ಹೆಚ್ಚಳಕ್ಕೆ ಚೀನಾ ಸಹಾಯ ಮಾಡುತ್ತಿದೆ.
ಎಲ್‌ಒಸಿಯಲ್ಲಿ ಪಾಕಿಸ್ತಾನ ಸ್ಟೀಲ್ ಹೆಡ್ ಬಂಕರ್‌ಗಳ ನಿರ್ಮಾಣ ಮಾಡಲು ಬೆಂಬಲ ನೀಡಿರುವ ಚೀನಾ, ಮಾನವರಹಿತ ವೈಮಾನಿಕ ಹಾಗೂ ಯುದ್ಧ ವಾಹನಗಳನ್ನು ಒದಗಿಸಿದೆ. ಅಲ್ಲದೆ, ಗಡಿಯುದ್ಧಕ್ಕೂ ಅಂಡರ್ ಗ್ರೇಡ್ ಫೈಬರ್ ಕೇಬಲ್‌ಗಳನ್ನು ಹಾಕಲು ಮತ್ತು ಸಂವಹನ ಉದ್ದೇಶಕ್ಕಾಗಿ ಟವರ್‌ಗಳನ್ನು ಸ್ಥಾಪಿಸಲು ಚೀನಾ ಸೇನೆ ಸಹಾಯ ಮಾಡಿದೆ ಎಂದು ಭಾರತೀಯ ಅಧಿಕಾರಿಗಳು ತಿಳಿಸಿದ್ದಾರೆ.
ಸ್ಟೀಲ್‌ಹೆಡ್ ಬಂಕರ್, ಸಂವಹನ ಟವರ್ ಸ್ಥಾಪನೆ ಮಾಹಿತಿಗೆ ಅನುಕೂಲವಾಗುವ ಸೇನೆ ಮತ್ತು ಗುಪ್ತಚರ ನಿಟ್ಟಿನಲ್ಲಿ ಚೀನಿ ಮೂಲದ ಜೈವೈ ಮತ್ತು ಎಚ್‌ಜಿಆರ್‌ಗಳಂಥ ಸುಧಾರಿತ ರೇಡಾರ್‌ಗಳನ್ನು ಎಲ್‌ಒಸಿಯಲ್ಲಿ ನಿಯೋಜಿಸಿದೆ. ಚೀನಾದ ಸಂಸ್ಥೆಯೊಂದು ತಯಾರಿಸಿದ 155 ಎಂಎಂ ಟ್ರಕ್-ಮೌಂಟೆಡ್ ಹೊವಿಟ್ಟರ್ ಮತ್ತು ಎಸ್‌ಎಚ್-15 ಗನ್‌ಗಳು ಗಡಿಯಲ್ಲಿ ಕಂಡುಬಂದಿವೆ. ಈ ಕ್ರಮವು ಪಾಕಿಸ್ತಾನದೊಂದಿಗೆ ಚೀನಾದ ಸಂಬಂಧ ಗಟ್ಟಿಯಾಗಿದ್ದು, ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಚೀನಾದ ಹೂಡಿಕೆ ಬಯಲುಮಾಡಿದೆ. ವಿಶೇಷವಾಗಿ, ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್‌ಗೆ (ಸಿಪಿಇಸಿ) ಬೆಳವಣಿಗೆಯನ್ನು ಎತ್ತಿ ತೋರಿಸುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 2014ರಲ್ಲಿ ಪತ್ತೆಯಾದಂತೆ ಪಿಎಲ್ ಅಧಿಕಾರಿಗಳ ಉಪಸ್ಥಿತಿ ಕಂಡುಬಂದಿಲ್ಲ. ಆದರೂ, ಚೀನಾದ ಪಡೆಗಳನ್ನು ನಿರ್ಮಿಸುವುದು ಮತ್ತು ಪಿಒಕೆಯ ಲೀಪಾ ಕಣಿವೆಯಲ್ಲಿ ಚೀನಾ ತಜ್ಞರು ಸುರಂಗ ನಿರ್ಮಾಣದಲ್ಲಿ ತೊಡಗಿರುವುದು ಕಂಡುಬಂದಿದೆ ಎಂದು ಭಾರತೀಯ ಸೇನೆ ಅಧಿಕಾರಿಗಳು ತಿಳಿಸಿದ್ದಾರೆ.
Poll (Public Option)

Post a comment
Log in to write reviews