
ಬೆಂಗಳೂರು: ರೇಣಕಾಸ್ವಾಮಿ ಮೊಬೈಲ್‌ಗಾಗಿ ರಾಜಕಾಲುವೆಯಲ್ಲಿ ಶೋಧಕಾರ್ಯ ನಡೆಸಲಾಗುತ್ತಿದೆ. ಪೊಲೀಸರ ಮನವಿ ಮೇರೆಗೆ ಪೌರಕಾರ್ಮಿಕರು ರಾಜಕಾಲುವೆಗೆ ಇಳಿದಿದ್ದು ಮೊಬೈಲ್ ಹುಡುಕಾಟಕ್ಕೆ ಮುಂದಾಗಿದ್ದಾರೆ.
ರೇಣಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮೊಬೈಲ್ ಅತ್ಯಂತ ಮುಖ್ಯ ಸಾಕ್ಷಿಯಾಗಿದ್ದು ಪೊಲೀಸರು ಎಲ್ಲಾ ಕಡೆ ಹುಡುಕಾಟ ನಡೆಸಿದ್ದರು ಕೂಡ ಏನು ಪ್ರಯೋಜನವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ರೇಣುಕಾಸ್ವಾಮಿ ಪೋನ್ ಟ್ರೇಸ್ ಮಾಡುವ ಮೂಲಕ ಮೊಬೈಲ್ ಸಿಗ್ನಲ್ ಮತ್ತೆ ಹಚ್ಚಿದ್ದು ಅದು ರಾಜಕಾಲುವೆ ಎಂದು ತಿಳಿದು ಬಂದಿದೆ. ಈ ನಿಟ್ಟಿನಲ್ಲಿ ಇಂದು (ಜೂನ್ 17 ಸೋಮವಾರ) ಪೌರಕಾರ್ಮಿಕರ ನೆರವನ್ನು ಪಡೆಯುವ ಮೂಲಕ ಪೊಲೀಸರು ಮೊಬೈಲ್ ಹುಡುಕಾಟದಲ್ಲಿ ತೊಡಗಿದ್ದಾರೆ.
Poll (Public Option)

Post a comment
Log in to write reviews