
ಆಂಧ್ರ ಪ್ರದೇಶ್ : ಸೀರೆ ಹೆಣ್ಣಿಗೆ ಸೌಂದರ್ಯದ ಜೊತೆಗೆ ಗೌರವ ನೀಡುತ್ತದೆ ಎಂದು ಭಾಷಣ ಬಿಗಿದಿದ್ದ ವಿಶಾಖಪಟ್ಟಣಂ ಮಾಜಿ ಸಚಿವೆ ರೋಜಾ ಇದೀಗ ವಿದೇಶದಲ್ಲಿ ತುಂಡುಡುಗೆಯಲ್ಲಿ ಪ್ರತ್ಯಕ್ಷರಾಗಿದ್ದಾರೆ.
ಮಾಜಿ ಸಚಿವೆ, ಚಿತ್ರ ನಟಿ ರೋಜಾ ಈಗ ವಿದೇಶ ಪ್ರವಾಸದಲ್ಲಿದ್ದಾರೆ. ಅವರು ತುಂಡುಡುಗೆ ತೊಟ್ಟು ವಿದೇಶದಲ್ಲಿ ಸುತ್ತಾಡುತ್ತಿರುವ ಫೋಟೋಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.
ಮಾಜಿ ಸಚಿವೆ ರೋಜಾರವರು ಕಳೆದ ಚುನಾವಣೆಯ ಸೋಲಿನ ಬಳಿಕ ರಾಜಕೀಯವಾಗಿ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ. ಇದೀಗ ವಿದೇಶದಲ್ಲಿ ಪ್ರತ್ಯಕ್ಷರಾಗಿದ್ದಾರೆ. ಆದರೆ ರೋಜಾರವರ ಅವತಾರ ನೋಡಿದ ಜನ ಹೌಹಾರಿದ್ದಾರೆ. ಭಾರತದಲ್ಲಿ ಸೀರೆ ನಾರಿಯ ಸೌಂದರ್ಯ ಹೆಚ್ಚಿಸುತ್ತದೆ. ಸೀರೆ ಹೆಣ್ಣಿಗೆ ಸೌಂದರ್ಯದ ಜೊತೆಗೆ ಗೌರವ ನೀಡುತ್ತದೆ ಎಂದು ಭಾಷಣ ಮಾಡಿದ್ದ ರೋಜಾ ಇದೀಗ ವಿದೇಶ ಪ್ರವಾಸದಲ್ಲಿ ತುಂಡುಗೆಯ ವೈರಲ್ ಫೋಟೋ ನೋಡಿ ಜನ ಟ್ರೋಲ್ ಮಾಡಿದ್ದಾರೆ.
ಸಿನಿಮಾದ ಮೂಲಕ ಭಾರಿ ಜನಪ್ರಿಯತೆ ಪಡೆದ ರೋಜಾ ಬಳಿಕ ರಾಜಕೀಯವಾಗಿ ಸಂಚಲನ ಮೂಡಿಸಿದ್ದರು. ತೆಲುಗು ದೇಶಂ ಪಾರ್ಟಿ ಸೇರಿದ ರೋಜ ಅವರು ಚುನಾವಣೆಯಲ್ಲಿ ಸತತ 2 ಬಾರಿ ಗೆಲುವು ಸಾಧಿಸಿದ್ದರು ಮೂರನೇ ಭಾರೀ ಚುನಾವಣೆಯಲ್ಲಿ ಸೋಲು ಕಂಡಿದ್ದರು. ಇದಾದ ಬಳಿಕ ರೋಜಾ ಬಹಿರಂಗವಾಗಿ ಎಲ್ಲಿಯು ಕಾಣಿಸಿಕೊಳ್ಳುತ್ತಿರಲ್ಲಿಲ್ಲ. ಇದೀಗ ಇಟಲಿ ಪ್ರವಾಸದಲ್ಲಿ ರೋಜಾ ಅವರು ಶಾರ್ಟ್ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ.ಇವರ ಈ ನಡೆಗೆ ಎಲ್ಲೆಡೆ ವಿರೋಧ ವ್ಯಕ್ತವಾಗಿದೆ.
Poll (Public Option)

Post a comment
Log in to write reviews