
ಉತ್ತರಪ್ರದೇಶ: ಮರಳು ಲಾರಿ ಪಲ್ಟಿಯಾಗಿ ಎಂಟು ಜನರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಹರ್ದೋಯಿಯಲ್ಲಿ ನಡೆದಿದೆ.
ಅವಧೇಶ್ (40), ಅವರ ಪತ್ನಿ ಸುಧಾ (35), ಮತ್ತು ಅವರ ಮೂವರು ಮಕ್ಕಳಾದ ಲಲ್ಲಾ (5), ಸುನೈನಾ (11), ಮತ್ತು ಬುದ್ದು (4), ಸಂಬಂಧಿ ಕರಣ್ (35), ಅವರ ಪತ್ನಿ ಹೀರಾ (30) ಮತ್ತು ಇವರ ಮಗಳು ಕೋಮಲ್ (5) ಮೃತ ದುರ್ದೈವಿಗಳು.
ಕುಟುಂಬದ ಎಂಟು ಜನ ಮನೆಯ ಹೊರಗೆ ಮಲಗಿದ್ದರು ಆ ವೇಳೆ ಮರಳು ತುಂಬಿದ ಲಾರಿಯೊಂದು ಮನೆಯ ಒಳಗೆ ನುಗ್ಗಿದೆ. ಇದರ ಪರಿಣಾಮ ಲಾರಿ ಪಲ್ಟಿ ಹೊಡೆದು ಈ ದುರ್ಘಟನೆ ಸಂಭವಿಸಿದೆ.
Poll (Public Option)

Post a comment
Log in to write reviews