
ಹರಿಯಾಣ: ರಾಜ್ಯದ ಗುರುಗ್ರಾಮದ ನಟಿ ಅಂಜು ಶರ್ಮಾ ಫತೇಹಾಬಾದ್‌ನ ಕವಿತಾ ಟಪ್ಪೂ ಯುವತಿಯನ್ನು ಮದುವೆಯಾಗಿದ್ದಾಳೆ. ಈ ಮದುವೆಗೆ ಪ್ರಾರಂಭದಲ್ಲಿ ಎರಡೂ ಕಡೆಯ ಕೆಲವು ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ದು, ಬಳಿಕ ಇಬ್ಬರ ಕುಟುಂಬವೂ ಸಮ್ಮತಿ ನೀಡಿ, ಬಂಧು-ಬಳಗದ ಸಮ್ಮುಖದಲ್ಲಿ ಸಲಿಂಗಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಅಂಜು ಶರ್ಮಾ ಹೇಳುವಂತೆ ಕವಿತಾಳ ಪೋಷಕರು ತೀರಿಹೋಗಿದ್ದಾರೆ. ಆಕೆಯ ತಂಗಿಗೆ ಮದುವೆಯಾಗಿದೆ. ನಮ್ಮ ಮದುವೆ ಆಕೆಯ ಸೋದರ ಮಾವನಿಗೆ ತಿಳಿದಾಗ ಆತ ಮದುವೆಗೆ ಬರಲು ನಿರಾಕರಿಸಿದ್ದ. ಆದ್ದರಿಂದ ಮದುವೆಗೆ ಆಯ್ದ ಕೆಲವರನ್ನು ಮಾತ್ರ ಆಹ್ವಾನಿಸಲಾಗಿತ್ತು ಎಂದು ಹೇಳಿದ್ದಾರೆ.
ಅಂಜು ಶರ್ಮಾ ಅವರು ಟಿವಿ ಕಲಾವಿದೆ, ಕೋವಿಡ್ ಅವಧಿಯಲ್ಲಿ ಕಾರ್ಯಕ್ರಮವೊಂದರ ಶೂಟಿಂಗ್ ವೇಳೆ ಕವಿತಾ ಟಪ್ಪೂ ಮೇಕಪ್ ಆರ್ಟಿಸ್ಟ್ ಆಗಿ ಬಂದಿದ್ದಾರೆ. ಈ ಸಮಯದಲ್ಲಿ ಇಬ್ಬರ ಪರಿಚಯವಾಗಿದೆ. ಆ ಸಮಯದಲ್ಲಿ ಕವಿತಾ ಸುಮಾರು 40 ದಿನಗಳ ಕಾಲ ಅಂಜು ಜೊತೆಗೆದ್ದಳು. ಈ ಸಮಯದಲ್ಲಿ ಇವರಿಬ್ಬರ ನಡುವೆ ಪರಸ್ಪರ ಪ್ರೀತಿ ಚಿಗುರಿದೆ. ಇದೀಗ ನಾಲ್ಕು ವರ್ಷಗಳ ಪ್ರೀತಿಯ ಬಳಿಕ ಮದುವೆಯಾಗಿದ್ದಾರೆ.
Poll (Public Option)

Post a comment
Log in to write reviews