
ನವದೆಹಲಿ: ದಿನವೊಂದಕ್ಕೆ ಮೂರು-ನಾಲ್ಕು ಜೊತೆ ಬಟ್ಟೆ ಧರಿಸುತ್ತಿದ್ದ ನರೇಂದ್ರ ಮೋದಿ ಎನ್‌ಡಿಎ ಗೆ ಕಡಿಮೆ ಬಹುಮತ ದೊರೆತ ನಂತರ ವರಸೆಯನ್ನೇ ಬದಲಾಯಿಸಿದ್ದಾರೆ.
ಪ್ರಧಾನಿಯಾಗಿ ಅಧಿಕಾರದಲ್ಲಿದ್ದಾಗ ಪ್ರತಿ ಕಾರ್ಯಕ್ರಮಕ್ಕೆ ಹೋಗುವಾಗಲೂ ಬೇರೆ ಬೇರೆ ಬಟ್ಟೆ ಧರಿಸಿ ಹೋಗುತ್ತಿದ್ದದ್ದು ಟೀಕೆಗೆ ಒಳಗಾಗುತ್ತಿತ್ತು. ಇದಕ್ಕೆ ಸಾಕ್ಷಿ ಎಂಬಂತೆ ಬುಧವಾರ ನಡೆದ ವಿಶ್ವಪರಿಸರ ದಿನದಲ್ಲಿ ಎಲ್ಲಾ ಕಾರ್ಯಕ್ರಮಕ್ಕೂ ಒಂದೇ ಬಟ್ಟೆ ಹಾಕಿರುವುದು ಈಗ ಚರ್ಚೆ ಹಾಗೂ ಟ್ರೋಲ್‌ಗೆ ಒಳಗಾಗಿದೆ.
ಜೂನ್ 5 ರಂದು ನಡೆದ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಧರಿಸಿದ್ದ ಬಟ್ಟೆಯನ್ನೇ, ಮಧ್ಯಾಹ್ನ ರಾಷ್ಟ್ರಪತಿಗಳನ್ನ ಭೇಟಿ ಸಂಧರ್ಭದಲ್ಲೂ ಧರಿಸಿದ್ದರು. ನಂತರ ಅದೇ ದಿನ ಸಂಜೆ ನಡೆದ ಎನ್‌ಡಿಎ ಸಭೆಯಲ್ಲೂ ಅದೇ ಬಟ್ಟೆ ಧರಿಸುದ್ದು ವಿಶೇಷವಾಗಿತ್ತು. ಹೀಗೆ ದಿನಕ್ಕೆ ನಾಲ್ಕೈದು ಕಾರ್ಯಕ್ರಮವಿದ್ದರೂ ಪ್ರತಿ ಕಾರ್ಯಕ್ರಮಕ್ಕೆ ಹೊಸ ಬಟ್ಟೆ ತೊಟ್ಟು ಮೋಜುಗಾರನಂತೆ ಬರುತ್ತಿದ್ದ ಮೋದಿಯ ಈ ನಡೆ ಈಗ ಚರ್ಚೆಗೆ ಗ್ರಾಸವಾಗಿದೆ. ಅಲ್ಲದೆ ಈ ಹಿಂದಿನಂತಿದ್ದ ಕಳೆ ಈಗಿಲ್ಲ ಎನ್ನುವುದು ಕೂಡ ಇಲ್ಲಿ ಗಮನಿಸಬೇಕಾದದ್ದೆ. ಅಲ್ಲದೆ ಫಲಿತಾಂಶದ ನಂತರ ದಿನವಿಡೀ ಒಂದೇ ಉಡುಪು ಧರಿಸಿರುವುದು ಸಾಮಾಜಿಕ ಜಾಲತಾಣದಲ್ಲಿ ವಿಧವಿಧವಾದ ಚರ್ಚೆಗೆ ಎಡೆಮಾಡಿಕೊಟ್ಟಿದೆ.
Poll (Public Option)

Post a comment
Log in to write reviews