2024-09-19 05:04:02

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ನಾಗ ಚೈತನ್ಯ ಮದುವೆಯಿಂದ ಗುರತೇ ಸಿಗದಷ್ಟು ಬದಲಾದ ಸಮಂತಾ ರುಥ್ ಪ್ರಭು

ನಟಿ ಸಮಂತಾ ರುಥ್ ಪ್ರಭು ಅವರು ಇತ್ತೀಚೆಗೆ ಮುಂಬೈನಲ್ಲಿ ಸಿಂಪಲ್ ಲುಕ್​ನಲ್ಲಿ ಕಾಣಿಸಿಕೊಂಡಿದ್ದು, ನಿದ್ದೆ ಇಲ್ಲದೆ ಮುಖವೆಲ್ಲ ಸೊರಗಿದಂತೆ ಕಾಣಿಸಿದ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅವರ ಮಾಜಿ ಪತಿ ನಾಗ ಚೈತನ್ಯ ಅವರು ನಟಿ ಶೋಭಿತಾ ಧೂಳಿಪಾಲ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಇದು ಸಮಂತಾಗೆ ದುಃಖ ತರಿಸಿತೇ ಎನ್ನುವ ಪ್ರಶ್ನೆಯನ್ನು ಹುಟ್ಟು ಹಾಕಿದೆ ಎನ್ನಲಾಗಿದೆ.

ಸಮಂತಾ ಗ್ಲಾಮರಸ್ ಆಗಿ ಮಿಂಚುತ್ತಿದ್ದರು. ಸದಾ ನಗುತ್ತಿದ್ದರು. ಆದರೆ, ಈಗ ಸಮಂತಾ ಬದಲಾಗಿದ್ದಾರೆ. ಸಮಂತಾ ಅವರ ಮುಖದಲ್ಲಿ ಮೊದಲಿದ್ದ ಚಾರ್ಮ್​ ಈಗ ಇಲ್ಲ. ಅಷ್ಟೇ ಅಲ್ಲ ಅವರು ಮತ್ತಷ್ಟು ತೆಳ್ಳಗೆ ಆಗಿದ್ದಾರೆ. ಇದು ಫ್ಯಾನ್ಸ್ ಆತಂಕಕ್ಕೆ ಕಾರಣ ಆಗಿದೆ. ‘ದಯವಿಟ್ಟು ಏನಾದರೂ ತಿನ್ನಿ’ ಎಂದು ಅನೇಕರು ಕೋರಿಕೊಂಡಿದ್ದಾರೆ. ಸಮಂತಾ ಅವರು ಯಾವುದನ್ನೋ ಮನಸ್ಸಿಗೆ ಅತಿಯಾಗಿ ಹಚ್ಚಿಕೊಂಡು, ಕೊರಗಿದಂತಿದೆ ಎಂದು ಕೂಡ ಫ್ಯಾನ್ಸ್ ಊಹಿಸಿದ್ದಾರೆ.

‘ಸಮಂತಾ ಅವರು ನಿರಂತರವಾಗಿ ಸರ್ಜರಿಗೆ ಒಳಗಾಗಿದ್ದು, ಇದರಿಂದ ಅವರ ನಿಜವಾದ ಅಂದ ಹೋಗಿದೆ’ ಎಂದು ಕೆಲವರು ಹೇಳಿದ್ದಾರೆ. ‘ಸಮಂತಾ ಖುಷಿಯಾಗಿಲ್ಲ. ಅವರ ನಗು ಮಾಯ ಆಗಿದೆ’ ಎಂದು ಕೆಲ ಮಂದಿ ಕಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಸಮಂತಾ ಅವರ ಹೊಸ ವಿಡಿಯೋ ಸಾಕಷ್ಟು ಚರ್ಚೆ ಹುಟ್ಟುಹಾಕಿದ್ದಂತೂ ನಿಜ.

ಸಮಂತಾ ನಟನೆಯ ‘ಸಿಟಾಡೆಲ್: ಹನಿ ಬನಿ’ ರಿಲೀಸ್ ಆಗಬೇಕಿದೆ. ಇದನ್ನು ಹೊರತುಪಡಿಸಿ ಸಮಂತಾ ಯಾವುದೇ ಹೊಸ ಸಿನಿಮಾ ಒಪ್ಪಿಕೊಂಡಿಲ್ಲ. ಇದು ಕೂಡ ಸಾಕಷ್ಟು ಚರ್ಚೆಗೆ ಹುಟ್ಟುಹಾಕಿದೆ. ಸಮಂತಾ ಅವರು ಅನಾರೋಗ್ಯದಿಂದ ಸಂಪೂರ್ಣವಾಗಿ ಚೇತರಿಕೆ ಕಂಡಿಲ್ಲ ಎಂಬುದಕ್ಕೆ ಇದು ಉದಾಹರಣೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ ಎನ್ನಲಾಗಿದೆ.

Post a comment

No Reviews