2024-12-24 06:11:58

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ತೆರೆಗೆ ಬರಲಿದೆಯಾ ಸಲಾರ್‌ ಪಾರ್ಟ್‌-2: ಈ ಬಗ್ಗೆ ನೀಲ್‌ ಹೇಳಿದ್ದೇನು?

ಸಲಾರ್ 2 ಸ್ಟಾಪ್ ಆಯ್ತು ಅನ್ನೋ ಸುದ್ದಿ ಸಂಚಲನದ ಬೆನ್ನಲ್ಲೇ ಸಲಾರ್ 2 ಬಗ್ಗೆ ತಾಜಾ ಸುದ್ದಿಗಳು ಹೊರಬೀಳ್ತಿವೆ. ಇದೀಗ ಖುದ್ದು ಸಲಾರ್ ನಿರ್ದೇಶಕ  ಪ್ರಶಾಂತ್ ನೀಲ್ ಸಲಾರ್ ಸೀಕ್ವೆಲ್ ಬಗ್ಗೆ  ಬಿಗ್ ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದಾರೆ. ಹಾಗೆಯೇ ಇದೇ ತಿಂಗಳ ಕೊನೆಯಲ್ಲಿ ಸಲಾರ್ ಪಾರ್ಟ್ 2 ಚಿತ್ರೀಕರಣಕ್ಕೆ ಕಿಕ್‌ ಸ್ಟಾರ್ಟ್ ನೀಡುವುದಾಗಿ ತಿಳಿಸಿದ್ದಾರೆಂದು ಟಿಟೌನ್ ಮೀಡಿಯಾಗಳು ಸುದ್ದಿ ಮಾಡ್ತಿವೆ.

ಇಂಟ್ರೆಸ್ಟಿಂಗ್ ಅಂದರೆ ಕೆಜಿಎಫ್ 3 ಬಗ್ಗೆಯೂ ನೀಲ್ ಸಾಹೇಬ್ರು ತುಟಿ ಬಿಚ್ಚಿ ಮಾತನಾಡಿದ್ದಾರೆ. ಹಿಂದೊಮ್ಮೆ ಕೆಜಿಎಫ್ 3 ಗೆ ನಾನು ಆಕ್ಷನ್ ಕಟ್ ಹೇಳ್ತಿನೋ? ಇಲ್ವೋ ? ನನಗೆ ಡೌಟಿದೆ ಅನ್ನೋ ಮಾತುಗಳನ್ನಾಡಿದ್ದರು. ಆದರೆ, ಕೆಜಿಎಫ್ 3 ಬರೋದು ಪಕ್ಕಾ ಅಂತಲೂ ತಿಳಿಸಿದ್ದರು. ಆದರೆ, ನೀಲ್ ಸಲಾರ್ 2,  ಎನ್ ಟಿ ಆರ್ 31 ಘೋಷಣೆ ಮಾಡಿದ್ದರಿಂದ, ರಾಕಿ ಭಾಯ್ ಕೆಜಿಎಫ್ ಟೀಮ್ ಬಿಟ್ಟು ಟಾಕ್ಸಿಕ್ ತಂಡ ಕಟ್ಟಿದ್ದರಿಂದ, ಕೆಜಿಎಫ್ 3 ಡೌಟ್ ಎನ್ನಲಾಗಿತ್ತು. ಆದರೆ ಇದೀಗ ಆ ಎಲ್ಲಾ ಊಹಾಪೋಹಾಗಳಿಗೆ ಪ್ರಶಾಂತ್‌ ನೀಲ್‌ ತೆರೆ ಎಳೆದಿದ್ದಾರೆ ಎನ್ನಲಾಗಿದೆ.

Post a comment

No Reviews