
ಬೆಂಗಳೂರು : ವೈಟ್ ಬೋರ್ಡ್‌ನಲ್ಲಿ ಟ್ರಾವೆಲ್ಸ್ ನಡೆಸುತ್ತಿದ್ದ ಕಾರು ಮಾಲೀಕರಿಗೆ RTO ಅಧಿಕಾರಿಗಳು ಶಾಕ್ ಕೊಟ್ಟಿದೆ. ಅನಧಿಕೃತವಾಗಿ ಸಂಚಾರ ಮಾಡುತ್ತಿದ್ದ ಬಿಎಂಡಬ್ಲ್ಯೂ, ಎಲೆಕ್ಟ್ರಿಕ್ ಬಿವೈಡಿ ಸೇರಿದಂತೆ 40ಕ್ಕೂ ಹೆಚ್ಚು ವಾಹನಗಳನ್ನು ಸೀಜ್ ಮಾಡಿ 200ಕ್ಕೂ ಹೆಚ್ಚು ಕೇಸ್ ದಾಖಲಿಸಲಾಗಿದೆ.
ಆ್ಯಪ್ ಮೂಲಕ ಅನಧಿಕೃತವಾಗಿ ವೈಟ್ ಬೋರ್ಡ್ ಕಾರುಗಳನ್ನು ಬಾಡಿಗೆಗೆ ನೀಡಲಾಗುತ್ತಿತ್ತು. ಇದೀಗ ಎಚ್ಚೆತ್ತ RTO ಅಧಿಕಾರಿಗಳು ಕಾರು ಮಾಲೀಕರಿಗೆ ಬಿಸಿ ಮುಟ್ಟಿಸಿದ್ದಾರೆ. ಇಂದು ಬೆಳ್ಳಿಗೆ ಬೆಂಗಳೂರಿನಲ್ಲಿ ಹತ್ತು ತಂಡಗಳಾಗಿ ಕಾರ್ಯಚರಣೆಗೆ ಇಳಿದ RTO ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ. ತೆರಿಗೆ ಕಟ್ಟದ, ವಾಹನಗಳ ಮೇಲೆ ಅನಧಿಕೃತವಾಗಿ ಅಡ್ವರ್ಟೈಸ್ಮೆಂಟ್ ಹಾಕಿದ, ಹೆಚ್ಚುವರಿ ಲೈಟ್ಸ್, ಬಸ್ ಮೇಲೆ ಹೆವಿ ಲೋಡ್ ಸೇರಿದಂತೆ ಎಲ್ಲಾ ವಾಹನಗಳನ್ನು ಸೀಜ್ ಮಾಡಿದ್ದಾರೆ. ಸಿಲಿಕಾನ್ ಸಿಟಿಯ ಸಾಕಷ್ಟು ಕಾರು ಮಾಲೀಕರು ತಮ್ಮ ವೈಟ್ ಬೋರ್ಡ್ ಕಾರುಗಳಲ್ಲಿ ಟ್ರಾವೆಲ್ಸ್ ನಡೆಸುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಇಂದಿನಿಂದ ಅಂತಹ ವಾಹನಗಳನ್ನು ಸೀಜ್ ಮಾಡಲು RTO ಅಧಿಕಾರಿಗಳು ಮುಂದಾಗಿದ್ದಾರೆ.
ನಿಯಮಗಳ ಪ್ರಕಾರ ವೈಟ್ ಬೋರ್ಡ್ ವಾಹನಗಳಿರೋದು ಸ್ವಂತಕ್ಕೆ, ಯೆಲ್ಲೋ ಬೋರ್ಡ್ ವಾಹನಳನ್ನ ಮಾತ್ರ ಬಾಡಿಗೆ ಹೊಡೆಯಲು ಬಿಡಬೇಕು. ಆದರೆ, ಟ್ರಾವೆಲ್ಸ್ ಮಾಲೀಕರು ರೂಲ್ಸ್ ಬ್ರೇಕ್ ಮಾಡಿ ವಾಹನ ಚಲಾವಣೆ ಮಾಡಿದ್ದು, ಇಂತಹವರಿಗೆ RTO ಅಧಿಕಾರಿಗಳಿಂದ ಬಿಸಿ ತಟ್ಟಿದೆ.
Poll (Public Option)

Post a comment
Log in to write reviews