
ನಲಗೊಂಡ: ನವರಾತ್ರಿ ಉತ್ಸವದ ಅಂಗವಾಗಿ 4ನೇ ದಿನವಾದ ಇಂದು ತೆಲಂಗಾಣದ ನಲಗೊಂಡದಲ್ಲಿ ದೇವಿಯ ಮಂಟಪವನ್ನು 45 ಲಕ್ಷ ರೂಪಾಯಿ ನೋಟುಗಳಿಂದ ಅಲಂಕರಿಸಲಾಗಿತ್ತು. ಶ್ರೀ ಲಲಿತಾ ತ್ರಿಪುರ ಸುಂದರಿ ದೇವಿಯ ಅವತಾರದಲ್ಲಿ ಕಾಣಿಸಿಕೊಂಡ ದೇವಿಗೆ ಜನರು ಭಕ್ತಿಭಾವ ಮೆರೆದರು. 100, 200, 500 ರೂ. ಮೌಲ್ಯದ ಕರೆನ್ಸಿ ನೋಟುಗಳನ್ನು ಮಾಲೆಗಳಲ್ಲಿ ಕಟ್ಟಿ ದೇವಿಯ ಕೊರಳಿಗೆ ಹಾರ ಹಾಕಲಾಯಿತು. ಯಾದಾದ್ರಿ ಜಿಲ್ಲೆಯ ಚೌಟುಪ್ಪಲ್‌ನಲ್ಲಿ ಆರ್ಯ ವೈಶ್ಯ ಸಮುದಾಯದವರು ಈ ರೀತಿ ಈ ಬಾರಿ ದೇವಿಯ ನವರಾತ್ರಿಯನ್ನು ಅದ್ಧೂರಿಯಾಗಿ ಆಚರಿಸುತ್ತಿದ್ದಾರೆ.
Poll (Public Option)

Post a comment
Log in to write reviews