
ಚಿತ್ರದುರ್ಗ : ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನವಾಗಿರುವ ನಟ ದರ್ಶನ್ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಫೋಟೋಗಳು ವೈರಲ್ ಆಗಿದ್ದು, ರಾಜಾತಿಥ್ಯದೊಂದಿಗೆ ಅರಾಮಾಗಿದ್ದಾರೆ. ಈ ಬಗ್ಗೆ ಮೃತ ರೇಣುಕಾಸ್ವಾಮಿ ತಂದೆ ಬೇಸರ ವ್ಯಕ್ತಪಡಿಸಿದ್ದು, ಜೈಲು ಜೈಲಾಗಿರಬೇಕು ಆದರೆ ಜೈಲು ರೆಸಾರ್ಟ್‌ನಂತಾಗಿದೆ ಎಂದಿದ್ದಾರೆ.
ನ್ಯಾಯಾಂಗ ಊಟ ಕೊಟ್ಟಿಲ್ಲ, ನಮಗೆ ನ್ಯಾಯಾಂಗದ ಮೇಲೆ ನಂಬಿಕೆ ಇದೆ. ಈ ಘಟನೆ ನೋಡಿ ನನಗೆ ಪರಮಾಶ್ವರ್ಯ ಆಗಿದೆ. ಜೈಲು ಜೈಲು ಆಗಿರಬೇಕು, ಮತ್ತೊಂದು ಆಗಿರಬಾರದು. ಕುರ್ಚಿ ಚಹಾ, ಸಿಗರೇಟ್ ಹಿಡಿದು ಕೂತಿದ್ದಾರೆ. ರೆಸಾರ್ಟ್‌ನಲ್ಲಿ ಕುಳಿತಂತೆ ಕುಳಿತಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ತಪ್ಪಿತಸ್ಥರಿಗೆ ಶಿಕ್ಷೆ ಆಗುತ್ತದೆ ಎಂದಿದ್ದಾರೆ. ಪೊಲೀಸರ ಮೇಲೆ ನಮಗೆ ಪೂರ್ಣ ನಂಬಿಕೆ ಇದೆ ಎಂದರು.
ಕಣ್ಣೀರಿಟ್ಟ ತಂದೆ
ನನ್ನ ಮಗನ ಕಳೆದುಕೊಂಡಿದ್ದು, ನನ್ನ ಮಗನಿಗೆ ಶಾಂತಿ ಸಿಗಬೇಕು ಎಂದರೆ ಕೊಲೆ ಮಾಡಿವರಿಗೆ ಶಿಕ್ಷೆಯಾಗಬೇಕು. ಸರ್ಕಾರ ನಿರ್ದಾಕ್ಷಿಣ್ಯವಾಗಿ ತನಿಖೆ ಮಾಡಬೇಕು. ಕೈಮುಗಿದು ಸರ್ಕಾರವನ್ನ ನಾನು ಕೇಳುತ್ತೇನೆ ಎಂದು ರೇಣುಕಾ ಸ್ವಾಮಿ ತಂದೆ ಶಿವನಗೌಡ ಕಣ್ಣೀರು ಹಾಕಿದರು.
ಸರ್ಕಾರ, ಪೊಲೀಸರು, ನ್ಯಾಯಾಂಗದ ಮೇಲೆ ನಂಬಿಕೆ ಇದೆ. ನನ್ನ ಮಗನ ಸಾವಿಗೆ ಈಡೀ ರಾಜ್ಯ ದುಃಖ ಪಟ್ಟಿದೆ.
ಗೃಹ ಸಚಿವರು ಕೂಡಾ ಈ ಬಗ್ಗೆ ಗಮನ ಹರಿಸಬೇಕು. ನಮ್ಮ ಮನೆತನ ಕಣ್ಣಿರಲ್ಲಿ ಕೈತೊಳೆದಿದ್ದೇವೆ. ಇಂಥವರಿಗೆ ಮನುಷ್ಯತ್ವ ಇದಿಯಾ ಎಂದು ಪ್ರಶ್ನಿಸಿದರು ?
ನಮ್ಮ ಹೊಟ್ಟೆ ಉರಿಯುತ್ತದೆ
ದಿನ ಬೆಳಕಾದ್ರೆ ಸೊಸೆ ಜೀವನದ ಬಗ್ಗೆ ಸಂಕಟ ಆಗುತ್ತದೆ. ಇಂಥ ದೃಷ್ಯ ನಮ್ಮ ಹೊಟ್ಟೆ ಉರಿಸುತ್ತದೆ.ದಯವಿಟ್ಟು ಅರ್ಥ ಮಾಡಿಕೊಂಡು ಸಮಗ್ರ ತನಿಖೆ ಆಗಬೇಕು. ಈತರ ಆಗುತ್ತದೆ ಎಂದಾದರೆ ಸಿಬಿಐ ತನಿಖೆ ನಡೆಸಬೇಕು ಎಂದು ಶಿವನಗೌಡರ್ ಮನವಿ ಮಾಡಿಕೊಂಡಿದ್ದಾರೆ.
Poll (Public Option)

Post a comment
Log in to write reviews