
ವಿಜಯಪುರ: ಗುಂಡಿನ ದಾಳಿಯಿಂದಾಗಿ ಬಿಜೆಪಿ ಪುರಸಭೆ ಸದಸ್ಯೆಯ ಪತಿ ರೌಡಿ ಶೀಟರ್ ಅಶೋಕ ಮೃತಪಟ್ಟಿರುವ ಘಟನೆ ಚಡಚಣ ಪಟ್ಟಣದ ನೀವರಗಿ ರಸ್ತೆಯ ಬಳಿ ನಡೆದಿದೆ.
ರೌಡಿ ಶೀಟರ್ ಅಶೋಕ ಇತ್ತೀಚೆಗೆ ಜೈಲಿನಿಂದ ಪೆರೋಲ್ ಮೇಲೆ ಹೊರ ಬಂದಿದ್ದ. ಮನೆಯಿಂದ ಚಡಚಣ ಪಟ್ಟಣಕ್ಕೆ ಆಗಮಿಸುತ್ತಿದ್ದ ವೇಳೆ ಹಂತಕರು ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯಿಂದ ಅಶೋಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಅಶೋಕ, ಕೊಲೆ ಹಾಗೂ ಇತರೆ ಕೇಸ್‌ಗಳಲ್ಲಿ ಅಪರಾಧಿಯಾಗಿದ್ದು, ಈತನ ಮೇಲಿನ ಹಳೆ ದ್ವೇಷದಿಂದ ದುಷ್ಕರ್ಮಿಗಳು ಕೊಲೆ ಮಾಡಿರೋ ಸಂಶಯ ವ್ಯಕ್ತವಾಗಿದೆ. ಮೃತ ಅಶೋಕನ ಪತ್ನಿ ಚಡಚಣ ಪಟ್ಟಣದ ಪುರಸಭೆ ವಾರ್ಡ್ ನಂಬರ್ 2ರ ಬಿಜೆಪಿ ಸದಸ್ಯೆಯಾಗಿದ್ದಾರೆ. ಚಡಚಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಚಡಚಣ ಪೊಲೀಸರು ಆಗಮಿಸಿ ಹತ್ಯೆಯಾದ ಸ್ಥಳವನ್ನು ಎಸ್ಪಿ ಶಂಕರ್ ಮಾರಿಹಾಳ ಪರಿಶೀಲನೆ ನಡೆಸಿದರು. ಪಟ್ಟಣದ ಪಂಡರಾಪುರ ರಸ್ತೆಯ ಬಳಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗದೆ ಎಂದು ತಿಳಿಸಿದ್ದಾರೆ.
Poll (Public Option)

Post a comment
Log in to write reviews