ಹಲವು ಕ್ರಿಮಿನಲ್ ಕೇಸ್ ನ "ಸರ್ದಾರ" ನಟ ದರ್ಶನ್ ಮೇಲೆ ರೌಡಿ ಶೀಟ್ ಓಪನ್? ಒಂದಲ್ಲಾ ಎರಡಲ್ಲಾ ಎಷ್ಟಿವೆ ಗೊತ್ತಾ ಕ್ರಿಮಿನಲ್ ಕೇಸ್?

ಬೆಂಗಳೂರು: ಪತ್ನಿಗೆ ಹೊಡೆಯೋದು, ಪುಡಾರಿಗಳನ್ನ ಬಿಟ್ಟು ಅಮಾಯಕರ ಮೇಲೆ ಮನಸ್ಸೋ ಇಚ್ಛೆ ಹಲ್ಲೆ ಮಾಡೋದು, ಹೀಗೆಲ್ಲಾ ಹತ್ತಾರು ಕೇಸ್ ಗಳು ನಟ ದರ್ಶನ್ ತಲೆ ಮೇಲೆ ತೂಗಾಡುತ್ತಿದ್ದು, ಇದೀಗ ದರ್ಶನ್ ಮೇಲೆ ರೌಡಿ ಶೀಟರ್ ಓಪನ್ ಆಗುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿವೆ.
ಈ ಕುರಿತು ರಾಜ್ಯ ಗೃಹ ಸಚಿವ ಡಾ. ಪರಮೇಶ್ವರ್ ಅವರು ಹೇಳಿಕೆ ನೀಡಿದ್ದು, ದರ್ಶನ್ ಈಗಾಗಲೇ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದು ಖಾತರಿಯಾಗಿದೆ. ಈ ಹಿನ್ನೆಲೆಯಲ್ಲಿ ನಟನ ಬಗ್ಗೆ ಸರ್ಕಾರ ಹೆಚ್ಚಿನ ಪರಿಶೀಲನೆ ಮಾಡುತ್ತಿದೆ. ಅದರಲ್ಲೂ ರಾಜ್ಯ ಪೊಲೀಸ್ ಇಲಾಖೆ ಮತ್ತಷ್ಟು ಹೆಚ್ಚಿನ ತನಿಖೆಯನ್ನು ನಡೆಸುತ್ತಿದೆ ಎಂದು ಹೇಳಿದ್ದಾರೆ. ಈ ಹೇಳಿಕೆಯನ್ನು ಗಮನಿಸಿದಾಗ ದರ್ಶನ್ ವಿರುದ್ಧ ರೌಡಿಶೀಟ್ ಓಪನ್ ಆಗುವ ಎಲ್ಲಾ ಸಾಧ್ಯತೆಗಳು ಮೇಲ್ನೋಟಕ್ಕೆ ಕಂಡುಬರುತ್ತಿದೆ.
ದರ್ಶನ್ ಅವರ ಈ ಹಿಂದಿನ ಕೇಸ್‌ಗಳೆಂದರೆ, ಪತ್ನಿ ವಿಜಯಲಕ್ಷ್ಮಿ ಮೇಲೆ ಹಲ್ಲೆ ಮಾಡಿ ಜೈಲು ಸೇರಿದ್ದು, ಹೋಟೆಲ್ ವೊಂದರಲ್ಲಿ ಸಪ್ಲೆಯರ್ ಮೇಲೆ ಹಲ್ಲೆ, ಕೆಲಸದಾಕೆಗೆ ಸಾಕು ನಾಯಿ ಬಿಟ್ಟು ಕಚ್ಚಿಸುವ ಮೂಲಕ ವಿಕೃತಿ ಮೆರೆದಿದ್ದು, ಸಿನಿಮಾ ಶೂಟಿಂಗ್ ವೇಳೆ ಸಹನಟನ ಮೇಲೆ ದರ್ಪ, ಹುಲಿ ಉಗುರು ಹಾಗೂ ಅಕ್ರಮವಾಗಿ ವನ್ಯ ಪ್ರಾಣಿ, ಪಕ್ಷಿಗಳ ಸಂಗ್ರಹ, ಮಾದ್ಯಮಗಳ ಮೇಲೆಯೇ ಅವಾಚ್ಯ ಶಬ್ಧಗಳ ಮೂಲಕ ನಿಂದನೆ, ತನ್ನ ಗ್ಯಾಂಗ್‌ನೊಂದಿಗೆ ಜೆಟ್ ಲ್ಯಾಗ್ ಹೊಟೆಲ್‌ನಲ್ಲಿ ಲೇಟ್ ನೈಟ್ ಪಾರ್ಟಿ ಮಾಡಿ ಕಾನೂನು ಉಲ್ಲಂಘಿಸಿದ್ದು, ಇಂತಹ ಹಲವು ಕೇಸ್ ಗಳ ಮದ್ಯೆ ಇದೀಗ ಕೇವಲ ಅಶ್ಲೀಲ ಮೆಸೇಜ್ ಮಾಡಿದ ಅನ್ನೋ ವಿಚಾರಕ್ಕೆ ತನ್ನ ಅಭಿಮಾನಿಯನ್ನೇ ಹತ್ಯೆಗೈದ ಪ್ರಕರಣ ಸೇರಿ ದರ್ಶನ್ ಅವರನ್ನು ರೌಡಿಶೀಟರ್ ಸ್ಥಾನದಲ್ಲಿ ನಿಲ್ಲಿಸಲು ಮುಂದಾಗಿದೆ ಎಂಬುದು ಮೇಲ್ನೋಟಕ್ಕೆ ಸಾಬೀತಾಗಿದೆ.
Poll (Public Option)

Post a comment
Log in to write reviews