
ಬೆಂಗಳೂರು : ಸ್ವಾತಂತ್ರೋತ್ಸವದ ರಜಾ ದಿನ, ವೀಕೆಂಡ್ ಹಾಗೂ ಸೋಮವಾರ ರಕ್ಷಾ ಬಂಧನ ಪ್ರಯುಕ್ತ ಸಾಲು ಸಾಲು ರಜೆಗಳು ಒಟ್ಟಿಗೆ ಇರುವ ಕಾರಣ ಬೆಂಗಳೂರಿನಿಂದ ತಮ್ಮ ಊರುಗಳಿಗೆ, ತೆರಳುವವರ ಸಂಖ್ಯೆ ಹೆಚ್ಚಾಗಿ ಕಂಡು ಬಂದಿದ್ದರಿಂದ ಪ್ರಯಾಣಿಕರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಹೆಚ್ಚುವರಿ ಒಟ್ಟು 510 ಬಸ್‌ಗಳನ್ನು ಬಿಡುಗಡೆ ಮಾಡಿದ್ದು, ಬುಧವಾರ ರಾತ್ರಿ ಮೆಜೆಸ್ಟಿಕ್ ಸುತ್ತಮುತ್ತ ಅತ್ಯಧಿಕ ಸಂಚಾರ ದಟ್ಟಣೆ ಕಂಡ ಬಂದಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಬೆಂಗಳೂರಿನಿಂದ ರಾಜ್ಯದ ಇತರ ಕಡೆಗೆ ತೆರಳುವವರಿಗೆ ಅನುಕೂಲವಾಗಲೆಂದು ಹೆಚ್ಚುವರಿಯಾಗಿ 450 ಬಸ್‌ಗಳನ್ನು ಬಿಟ್ಟಿದೆ. ಇನ್ನೂ ಇಲ್ಲಿಂದ ಹೊರ ರಾಜ್ಯಗಳಿಗೆ 60 ಬಸ್‌ಗಳನ್ನು ಕಾರ್ಯಾಚರಣೆ ಮಾಡುತ್ತಿದೆ. ಈ ಪೈಕಿ ನೆನ್ನೆ ಪ್ರಯಾಣಿಕರು 150 ಬಸ್‌ಗಳನ್ನು ಬುಕ್ ಮಾಡಿದ್ದಾರೆ.
ಬಸ್ ಆಪರೇಟಿಂಗ್‌ಗೆ ಸಿಬ್ಬಂದಿ ನಿಯೋಜನೆ
ಹೆಚ್ಚುವರಿ ಬಸ್ ಬಿಡುವ ಜೊತೆಗೆ ಜಯನಗರ, ವಿಜಯನಗರ ಸೇರಿದಂತೆ ಬೆಂಗಳೂರಿನ ಎಲ್ಲ ಕೆಎಸ್‌ಆರ್‌ಟಿಸಿ ಬಸ್ ಟರ್ಮಿನಲ್ ಗಳಲ್ಲಿ ಹೆಚ್ಚವರಿ ಬಸ್ ಆಪರೇಟರ್ ಅಧಿಕಾರಿ, ಸಿಬ್ಬಂದಿ ನಿಯೋಜನೆ ಮಾಡಲಾಗಿತ್ತು ಎಂದು ನಿಗಮದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Poll (Public Option)

Post a comment
Log in to write reviews