2024-09-19 04:33:49

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಯುಟ್ಯೂಬ್ ಚಾನಲ್ ಆರಂಭವಾದ 90 ನಿಮಿಷದಲ್ಲೇ 1 ಮಿಲಿಯನ್ ಸಬ್ಸ್ಕ್ರೈಬರ್ ಪಡೆದ ರೊನಾಲ್ಡೊ

ಹೈದರಾಬಾದ್​: ಪೋರ್ಚುಗಲ್​ನ ಫುಟ್ಬಾಲ್​ ದಿಗ್ಗಜ ಕ್ರಿಸ್ಟಿಯನೋ ರೊನಾಲ್ಡೊ ಬುಧವಾರ ತಮ್ಮದೇ ಆದ ಹೊಸ ಯುಟ್ಯೂಬ್​ ಚಾನಲ್​ವೊಂದನ್ನು ಆರಂಭಿಸಿದ್ದಾರೆ. ಆಗಸ್ಟ್​ 21ರಂದು ಆರಂಭವಾದ ಈ ಯೂಟ್ಯೂಬ್​ ಚಾನಲ್​ ಹೊಸ ಇತಿಹಾಸವನ್ನೇ ಸೃಷ್ಟಿಸಿದೆ. ಚಾನಲ್​ ಆರಂಭವಾದ 90 ನಿಮಿಷದಲ್ಲೇ 1 ಮಿಲಿಯನ್​ ಸಬ್​ಸ್ಕ್ರೈಬರ್​ಗಳಾಗಿದ್ದಾರೆ. ಈ ಚಾನಲ್​ ಮೂಲಕ ರೊನಾಲ್ಡೊ ಪುಟ್ಬಾಲ್​ ಆತದ ತೆರೆ ಹಿಂದಿನ ಕಥೆಗಳು ಸೇರಿದಂತೆ ಅವರ ಜೀವನದ ಸ್ವಾರಸ್ಯಕರ ವಿಚಾರಗಳನ್ನು ಅಭಿಮಾನಿಗಳ ಎದುರು ಅನಾವರಣಗೊಳಿಸಲಿದ್ದಾರೆ.

ಇನ್ನು, ಚಾನಲ್​ ಆರಂಭವಾಗಿ ದಿನ ಕಳೆಯುವುದರೊಳಗೆ 11.5 ಮಿಲಿಯನ್​ ಸಬ್​ಸ್ಕ್ರೈಬರ್​ಗಳಾಗಿದ್ದಾರೆ. ಈ ಮೊದಲು ಫುಟ್ಬಾಲ್​ ಸ್ಟಾರ್​ ತಮ್ಮದೇ ಹೊಸ ಯುಟ್ಯೂಬ್​ ಚಾನಲ್​ವೊಂದನ್ನು ಶೀಘ್ರದಲ್ಲಿ ಪ್ರಾರಂಭಿಸುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಘೋಷಣೆ ಮಾಡಿದ್ದರು. ಈ ಚಾನಲ್​ ಬಗ್ಗೆ ಅಭಿಮಾನಿಗಳಲ್ಲೂ ಸಾಕಷ್ಟು ಕಾತುರ ವ್ಯಕ್ತವಾಗಿತ್ತು. ಇನ್ನು, ರೊನಾಲ್ಡೊಗೆ ಎಕ್ಸ್​ನಲ್ಲಿ 112.6 ಮಿಲಿಯನ್​ ಬೆಂಬಲಿಗರಿದ್ದರೆ, ಫೇಸ್​ಬುಕ್​ನಲ್ಲಿ 170 ಮಿಲಿಯನ್​ ಮತ್ತು ಇನ್ಟ್ಸಗ್ರಾಂನಲ್ಲಿ 636 ಮಿಲಿಯನ್​ ಬೆಂಬಲಿಗರಿದ್ದಾರೆ.

ಚಾನಲ್​ ಬಿಡುಗಡೆಗೆ ಮುನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಹಂಚಿಕೊಂಡಿದ್ದ ಕ್ರಿಸ್ಟಿಯನೋ ರೊನಾಲ್ಡೊ. ನನ್ನ ಯುಟ್ಯೂಬ್​​ ಚಾನಲ್​ ಅಂತಿಮವಾಗಿ ಹೊರಬಂದಿದೆ. ನನ್ನ ಹೊಸ ಪ್ರಯಾಣಕ್ಕೆ ಸೇರಲು ಚಂದಾದಾರರಾಗಿ ಎಂದು ತಿಳಿಸಿದ್ದರು. ಈ ಯುಟ್ಯೂಬ್​ ಚಾನಲ್​ಗೆ 'ಯುಆರ್​ ಕ್ರಿಸ್ಟಿಯನೋ' ಎಂದು ಹೆಸರಿಡಲಾಗಿದೆ. 39 ವರ್ಷದ ಪೋರ್ಚುಗಲ್​ ಮೂಲದ ಪುಟ್ಬಾಲ್​ ತಾರೆಯ ಮೊದಲ ವಿಡಿಯೋವನ್ನು 13 ಗಂಟೆಗಳಲ್ಲಿ 7.95 ಮಿಲಿಯನ್​ ಜನರು ವೀಕ್ಷಿಸಿದ್ದಾರೆ.

Post a comment

No Reviews