
ಮೈಸೂರು : ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬಂಡೆಯೇ ಸಮಸ್ಯೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಡಿಸಿಎಂ ಡಿಕೆ ಶಿವಕುಮಾರ್ಗೆ ಟಾಂಗ್ ನೀಡಿದ್ದಾರೆ.
ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಜೆಡಿಎಸ್ ಆಯೋಜಿಸಿರುವ ಪಾದಯಾತ್ರೆಯ ಕೊನೆಯ ದಿನ ಮೈಸೂರಿನಲ್ಲಿ ಮಾತನಾಡಿದ ಅವರು, ಪಾದಯಾತ್ರೆಗೆ ಉತ್ತಮವಾಗಿ ಜನಬೆಂಬಲ ಸಿಕ್ಕಿದೆ,ಸಿದ್ದರಾಮಯ್ಯನ ಹಿಂದೆ ಬಂಡೆ ಇದೆ ಎಂದು ಡಿಸಿಎಂ ಡಿಕೆ ಹೇಳಿದ್ದಾರೆ. ಈ ಬಂಡೆಯೇ ಸಿದ್ದರಾಮಯ್ಯಗೆ ಪ್ರಾಬ್ಲಂ. ಮುಖವಾಡ ಹಾಕಿ ಒಳಗೊಂದು ಹೊರಗೊಂದು ಮಾತನಾಡುತ್ತಿದ್ದಾರೆ. ಈಗಾಗಲೇ ಬಂಡೆ ಸಿಎಂ ಕುರ್ಚಿಗೆ ಟವೆಲ್ ಹಾಕಿಕೊಂಡು ಕುಳಿತಿದೆ. ಬಂಡೆ ಯಾವಾಗ ಬೇಕಾದರೂ ಸಿದ್ದರಾಮಯ್ಯ ಮೇಲೆ ಬೀಳಬಹುದು ಎಂದು ನಿಖಿಲ್ ಹೇಳಿದರು.
ಸಿದ್ದರಾಮಯ್ಯ ಜನತಾ ಪರಿವಾರದಲ್ಲಿದ್ದಾಗ ಏನು ಮಾತನಾಡಿದ್ದರು ಎಂಬುದು ಗೊತ್ತಿದೆ. ಸೋನಿಯಾ ಗಾಂಧಿ ಬಗ್ಗೆ ಏನೇನು ಮಾತನಾಡಿದ್ದಾರೆ ಎಲ್ಲಾ ಗೊತ್ತಿದೆ. ಮಲ್ಲಿಕಾರ್ಜುನ ಖರ್ಗೆಯವರನ್ನು ರಾಜ್ಯದಿಂದ ಕೇಂದ್ರಕ್ಕೆ ಓಡಿಸಿದ್ದು ಯಾರು? ಜಿ ಪರಮೇಶ್ವರ್ರನ್ನು ಸೋಲಿಸಿದ್ದು ಯಾರು? ಎಲ್ಲವೂ ಕೂಡ ಗೊತ್ತಿದೆ ಎಂದು ನಿಖಿಲ್ ಹೇಳಿದರು.
Poll (Public Option)

Post a comment
Log in to write reviews