
ಹಾವೇರಿ: ಸಮ್ಮಸಗಿಯಿಂದ ಹರಿಹರಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಇದಾಗಿದ್ದು ಆರು ತಿಂಗಳಾದರು ಮುಗಿಯದ ಕಾಮಗಾರಿಯನ್ನ ಖಂಡಿಸಿ ಸ್ಥಳಿಯರು ಪ್ರತಿಭಟನೆ ಹಾನಗಲ್ ತಾಲೂಕಿನ ತಿಳವಳ್ಳಿ ಗ್ರಾಮದಲ್ಲಿ ನಡೆದಿದೆ.
ರಸ್ತೆಯು ಅರ್ಧ ಭಾಗ ಸಿಮೆಂಟ್ ರಸ್ತೆಯಾಗಿದ್ದು ಉಳಿದ ಅರ್ಧ ಭಾಗ ಆರು ತಿಂಗಳಿಂದ ಕಾಮಗಾರಿ ಮಾಡದೆ ಹಾಗೆ ಬಿಟ್ಟಿದ್ದಾರೆ. ಈ ಕಾರಣದಿಂದ ಸಾರ್ವಜನಿಕರಿಗೆ ತುಂಬ ತೊಂದರೆಯಾಗುತ್ತಿದೆ. ಇದನ್ನ ಖಂಡಿಸಿ ಸ್ಥಳೀಯರು ಸಂಬಂಧಪಟ್ಟ ಅಧಿಕಾರಿಗಳಿಗೆ ಸಾಕಷ್ಟು ಭಾರಿ ಮನವಿಗಳನ್ನು ಕೊಟ್ಟಿದ್ದರು ಯಾವುದೇ ರೀತಿಯ ಕೆಲಸ ನಡೆದಿಲ್ಲ.ಇದಕ್ಕೆ ಬೇಸತ್ತ ಗ್ರಾಮಸ್ಥರು ಇದಕ್ಕೆ ಕಾರಣವಾದ ಅಧಿಕಾರಿಗಳ ವಿರುದ್ಧ ಆಗಸ್ಟ್. 26ರಂದು ಗ್ರಾಮದ ಎನ್.ಎಸ್ ಹರಡೆೇಕರ್ ವೃತ್ತದ ಬಳಿ ಪ್ರತಿಭಟನೆ ನಡೆಸಿದ್ದಾರೆ.
ಈ ಪ್ರತಿಭಟನೆಯಲ್ಲಿ ಗ್ರಾಮದ ಮುಖಂಡರಾದ ಬಸವರಾಜ್ ಹಾದಿಮನಿ, ಗುತ್ಯಪ್ಪ ಬಾರ್ಕಿ, ಶಿವಲಿಂಗಪ್ಪ ತಲ್ಲೂರು ರಮೇಶ್ ಉಪ್ಪಾರ್, ಕುಮಾರ್ ಅಕ್ಮೊಜಿ, ದಯಾನಂದ, ಹಾವೇರಿ ಮಾರುತಿ ಈಳಿಗೆರೆ, ಡಾ. ಸುನಿಲ್ ಹಿರೇಮಠ, ಸುನಿಲ್ ಬಾರ್ಕಿ ,ಶಿವಾನಂದ್ ಕೋಡಿಹಳ್ಳಿ, ಇವರ ಮುಂದಾಳತ್ವದಲ್ಲಿ ಪ್ರತಿಭಟನೆ ನಡೆಸಿದರು. ಹಾಗೂ ಪ್ರತಿಭಟನೆಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು ಸದಸ್ಯರು ಮತ್ತು ಸಾರ್ವಜನಿಕರು ಹೋರಾಟದಲ್ಲಿ ಭಾಗಿಯಾಗಿದ್ದರು. ತದ ನಂತರ ತಾಲೂಕ್ ದಂಡಾಧಿಕಾರಿಗಳು ಅಲ್ಲಿನ ಜನರ ಸಮಸ್ಯೆಯನ್ನ ಆಲಿಸಿ ಮನವಿಗಳನ್ನು ಸ್ವೀಕರಿಸಿದ್ದಾರೆ.
Poll (Public Option)

Post a comment
Log in to write reviews